ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಂಗಳೂರು ವಿದ್ಯುಚ್ಫಕ್ತಿ ಸರಬರಾಜು ಕಂಪನಿಯು ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.29 ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಡ್ಡಿನಕೊಪ್ಪ, ಪೋದಾರ್ ಶಾಲೆ ರಸ್ತೆ, ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದ್ದು, ಈ ಪ್ರದೇಶದ ವ್ಯಾಪ್ತಿಗೊಳಪಡುವ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ:
ಮಂಗಳೂರು ವಿದ್ಯುಚ್ಫಕ್ತಿ ಸರಬರಾಜು ಕಂಪನಿಯು ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಫ್-೨ ಫೀಡರ್ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ಸ್ಪನ್ ಫೋಲ್ ಅಳವಡಿಕೆ ಕಾಮಗಾರಿ ಇರುವುದರಿಂದ ಡಿ.೨೯ರಂದು ಬೆಳಿಗ್ಗೆ ೯ರಿಂದ ಸಂಜೆ ೫ರವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯ ಬಾಲರಾಜ್ ಅರಸ್ ರಸ್ತೆ, ಸಿಟಿ ಕಾರ್ಪೋರೇಷನ್ ರಸ್ತೆ, ಫ್ಲವರ್ ಮಾರ್ಕೆಟ್ ರಸ್ತೆ, ಅಂಬೇಡ್ಕರ್ ಭವನ, ಕಸ್ತೂರಿಬಾ ಕಾಲೇಜು, ಬಿಎಸ್ಎನ್ಎಲ್ ಆಫೀಸ್, ನೆಹರೂ ರಸ್ತೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದ್ದು, ಈ ಪ್ರದೇಶದ ವ್ಯಾಪ್ತಿಗೊಳಪಡುವ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗ-೧ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post