ಕಲ್ಪ ಮೀಡಿಯಾ ಹೌಸ್ | ಬೈಂದೂರು |
ರಾಜ್ಯ ಸರಕಾರ ಮತ್ತು ಸಂಸದರ ವಿಶೇಷ ಪ್ರಯತ್ನದಿಂದ ಬೈಂದೂರು ಕ್ಷೇತ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ ಅತ್ಯಧಿಕ ಅನುದಾನ ದೊರೆತಿದೆ ಹಾಗೂ ಅವುಗಳ ಸಾರ್ಥಕ ಅನುಷ್ಟಾನಗೊಳ್ಳುತ್ತಿದೆ ಎಂದು ಎಂಎಲ್‌ಎ ಸುಕುಮಾರ್ ಶೆಟ್ಟಿ ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಒಟ್ಟು 19 ಜನರಿಗೆ ತಲಾ 1 ಲಕ್ಷ ಪರಿಹಾರ ದೊರೆತಿದೆ. 94ಸಿ ಹಕ್ಕು ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗಿದ್ದು, ಪ್ರವಾಸೋಧ್ಯಮ, ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಬೈಂದೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದು ಈಗಾಗಲೇ ಹಲವು ಮಹತ್ತರ ಯೋಜನೆಗಳು ಸಾಕಾರಗೊಂಡಿದೆ ಎಂದರು.

ಅಧಿಕಾರಿಗಳು ಫಲಾನುಭವಿಗಳಿಗೆ ಶೀಘ್ರ ಸರಕಾರದ ಯೋಜನೆಗಳನ್ನು ತಲುಪುವಲ್ಲಿ ನಿರಂತರ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















