ಕಲ್ಪ ಮೀಡಿಯಾ ಹೌಸ್ | ಶಿಕಾಗೋ |
ಕೋವಿಡ್-19 ಪಾಸಿಟೀವ್ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಶೌಚಾಲಯದಲ್ಲೇ ಐಸೊಲೇಟ್ ಆದ ವಿಚಿತ್ರ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ.
ಮಿಚಿಗನ್ ನಲ್ಲಿ ಶಿಕ್ಷಕಿಯಾಗಿರುವ ಮಾರಿಸಾ ಫೋಟಿಯೊ ಶಿಕಾಗೋದಿಂದ ಐಸ್ಲ್ಯಾಂಡ್ ಗೆ ತೆರಳುತ್ತಿದ್ದ ಮಾರ್ಗಮಧ್ಯೆ ಗಂಟಲು ಬೇನೆ ಬಾಧಿಸಲು ಪ್ರಾರಂಭಿಸಿದೆ. ಆದ್ದರಿಂದ ಆಕೆ ತಕ್ಷಣ ಶೌಚಾಲಯಕ್ಕೆ ತೆರಳಿ ರ್‍ಯಾಪಿಡ್ ಕೋವಿಡ್-19 ಪರೀಕ್ಷೆ ಮಾಡಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಆಕೆಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಆದ ಕಾರಣ ಆಕೆ ಸತತ ಮೂರು ಗಂಟೆಗಳ ಕಾಲ ಶೌಚಾಲಯದಲ್ಲೇ ಐಸೊಲೇಟ್ ಆಗಿದ್ದರು. ಈ ಕ್ಷಿಪ್ರ ಪರೀಕ್ಷೆಯಲ್ಲಿ ಆಕೆಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಡಬ್ಲ್ಯುಎಬಿಸಿ-ಟಿವಿ ವರದಿ ಪ್ರಕಟಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post