No Result
View All Result
Record Budget: Chief Minister Must Fulfill Hometown Demands, Urges Dr. Shushrutha Gowda
English Articles

Record Budget: Chief Minister Must Fulfill Hometown Demands, Urges Dr. Shushrutha Gowda

by ಕಲ್ಪ ನ್ಯೂಸ್
March 2, 2026
0

Kalpa Media House  |  Mysuru | BJP leader and noted neurologist Dr. Shushrutha Gowda has urged Chief Minister Siddaramaiah to...

Read moreDetails
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
  • Advertise With Us
  • Grievances
  • About Us
  • Contact Us
Tuesday, March 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಜಕೀಯ

ಸಜ್ಜನ ರಾಜಕಾರಣಿಯ ಸದ್ವರ್ತನೆ ಇದಲ್ಲ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 19, 2016
in ರಾಜಕೀಯ
0
Share on FacebookShare on TwitterShare on WhatsApp
ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ವಿಚಾರ  ರಾಜ್ಯ ಕಾಂಗ್ರೆಸ್‌ನಲ್ಲಿ ಸಣ್ಣಮಟ್ಟಿನ ತಲ್ಲಣವನ್ನುಂಟು ಮಾಡಿದೆ. ದಲಿತ ನಾಯಕ, ಪ್ರಾಮಾಣಿಕ, ಸಜ್ಜನ, ಸಚ್ಚಾರಿತ್ರ್ಯ  ಹೊಂದಿದ ರಾಜಕಾರಣಿ ಎಂದೆಲ್ಲ ಹೆಸರುಗಳಿಸಿದ್ದರು. ರಾಜಿನಾಮೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವರು ತೊಡೆತಟ್ಟಿದ್ದಾರೆ. ಈ ಮೂಲಕ ತಮ್ಮ ರಾಜಿನಾಮೆಗೆ ಕಾರಣವಾದ ಸೇಡನ್ನು ತೀರಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
ಮೇಲ್ನೋಟಕ್ಕೆ ಪ್ರಸಾದ್ ರಾಜಿನಾಮೆಗೆ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಕಾರಣ ಎನ್ನುವುದು ಕಂಡುಬರುತ್ತದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಕಂದಾಯ ಸಚಿವರಾಗಿದ್ದ ಅವರು ಅನಾರೋಗ್ಯದಿಂದ ಸಮರ್ಥವಾಗಿ ಇಲಾಖೆ ನಿಭಾಯಿಸಲಿಲ್ಲ ಎನ್ನುವುದು ಜನಜನಿತ. ಅದರಲ್ಲೂ ಕಂದಾಯದಂತಹ ಪ್ರಮುಖ ಖಾತೆಯನ್ನಿಟ್ಟುಕೊಂಡು ಬರಗಾಲದಂತಹ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿ ಅಧಿಕಾರಿಗಳನ್ನು ಎಚ್ಚರಿಸದಿದ್ದರೆ ರೈತರ ಸ್ಥಿತಿ ಇನ್ನಷ್ಟು ಕಷ್ಟಕ್ಕೆ ಸಿಲುಕುತ್ತದೆ ಎನ್ನುವುದೂ ಕಾರಣವಾಗಿರಬಹುದು.
ಪ್ರಸಾದ್ ಎಷ್ಟೇ ಉತ್ತಮ ಮನುಷ್ಯರಗಿದ್ದರೂ ಸದ್ಯದ ಅವರ ನಡವಳಿಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಬಿ.ಎಸ್ ಯಡಿಯೂರಪ್ಪ ಅವರನ್ನು ನೆನಪಿಸುತ್ತದೆ. ಬಂಗಾರಪ್ಪ ಕಾಂಗ್ರೆಸ್‌ನಿಂದ ಹೊರಬರುವಾಗ ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್, ರಾಜ್ಯದ ನಾಯಕರನ್ನು ವಾಚಾಮಗೋಚರವಾಗಿ ಬಯ್ಯುತ್ತ ಹೊರಬಂದಿದ್ದರು. ಅದೆ ರೀತಿ ಬಿಜೆಪಿ ಸೇರಿ ಅಲ್ಲಿಂದ ಹೊರಬರುವಾಗಲೂ ಅವರು ಬಿಜೆಪಿ ನಾಯಕರನ್ನು ಬೈದಿದ್ದೇ ಬೈದಿದ್ದು. ಕಾಂಗ್ರೆಸ್‌ನ್ನು ನಿರ್ನಾಮ ಮಾಡುತ್ತೇನೆಂದು ಪಣತೊಟ್ಟಿದ್ದರು. ಅವರ ನಿರ್ಗಮನದಿಂದ ಕಾಂಗ್ರೆಸ್‌ಗೆ ಒಂದಷ್ಟು ಹಾನಿ ಸಂಭವಿಸಿತಾದರೂ ಪಕ್ಷವೇನೂ ನಿರ್ನಾಮವಾಗಲಿಲ್ಲ. ಅದೇ ರೀತಿ ಬಿಜೆಪಿಗೂ ಹೇಳಿದ್ದರು. ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ಬಿಜೆಪಿ ಸೋಲಿಸುವುದೇ ತನ್ನ ಗುರಿ ಎಂದು ತೊಡೆ ತಟ್ಟಿದ್ದರು. ರಾಜ್ಯದಾದ್ಯಂತ ಬಂಗಾರಪ್ಪ ಅವರಂತೆ ಪ್ರವಾಸ ಮಾಡಿ ಪ್ರಚಾರ ಮಾಡಿದ್ದರು. ಅಲ್ಲಿ ಅವರೂ ವಿಫಲರಾದರು, ಬಿಜೆಪಿಯನ್ನೂ ಸೋಲಿಸಿದರು.
ಇವರಂತೆ ರಾಜ್ಯದಲ್ಲಿ ಬೇರೆ ಬೇರೆ ಪಕ್ಷದ ಇನ್ನೂ ಹಲವು ನಾಯಕರು ಇದೇ ರೀತಿ ಆರ್ಭಟಿಸಿ, ಗುಡುಗಿ, ನಂತರ ಹೇಳಹೆಸರಿಲ್ಲದಂತಾಗಿದ್ದಾರೆ. ಇದೆಲ್ಲ ರಾಜ್ಯದ ಮತದಾರರಿಗೆ ಗೊತ್ತಿರುವ ವಿಚಾರ. ಸದ್ಯ ಪ್ರಸಾದ್ ಈ ಮೇಲಿನ ಇಬ್ಬರು ನಾಯಕರಷ್ಟು ಜನಪ್ರಿಯರಲ್ಲದಿದ್ದರೂ, ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿರುವುದು ಅವರು ಅಧಿಕಾರದ ಖುರ್ಚಿ ಕಳಕೊಂಡ ನಿರಾಸೆ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಬಗ್ಗೆ ಹತಾಶೆಯಲ್ಲಿದ್ದಂತೆ ತೋರುತ್ತದೆ.
ಸಾಂಸದರಾಗಿ, ಕೇಂದ್ರ ಸಚಿವರಾಗಿ, ಮೂರ್ನಾಲ್ಕು ಬಾರಿ ಪಕ್ಷಾಂತರ ಮಾಡಿಯೂ ಮತ್ತೆ ಕಾಂಗ್ರೆಸ್ ಸೇರಿದಾಗ ಅವರಿಗೆ ನಂಜನಗೂಡು ಮೀಸಲು ಕ್ಷೇತ್ರದಿಂದ ಟಿಕೆಟ್ ಕೊಡಲಾಗಿತ್ತು. ಅಲ್ಲಿ ಗೆದ್ದು ಬಂದು ದಲಿತ ಕೋಟಾದಲ್ಲಿ ಸಚಿವರೂ ಆದರು. ಕೈಕೊಟ್ಟ ಆರೋಗ್ಯ ಅವರು ಉತ್ತಮ ಕೆಲಸ ಮಾಡಲು ಬಿಡಲಿಲ್ಲ. ಆ ಕಾರಣದಿಂದ ಅಧಿಕಾರ ಕಳಕೊಂಡರೆಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಸಾದ್ ಅವರಂತಹ ವ್ಯಕ್ತಿ ಈಗ ಈ ರೀತಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಕೆಲವು ನಾಯಕರ, ಹೈಕಮಾಂಡ್  ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವದನ್ನು ಗಮನಿಸಿದಾಗ ಅಧಿಕಾರದ ಚಟ ಎಂತಹವರನ್ನೂ ಬಿಡುವುದಿಲ್ಲ ಎನ್ನುವುದಕ್ಕೆ ಮತ್ತೆ ಸಾಕ್ಷಿಯಾಗುತ್ತಿದೆ. ಉತ್ತಮ ಕೆಲಸ ಮಾಡುತ್ತಿದ್ದ ವೇಳೆ ಕೈ ಬಿಟ್ಟಿದ್ದರೆ ಪ್ರಸಾದ್ ಅವರ ಮಾತನ್ನು ಒಪ್ಪಬಹುದಿತ್ತು. ಆದರೆ ಈಗ ಆಡುತ್ತಿರುವ ಅವರ ಮಾತು ಭ್ರಮನಿರಸನದ ಪ್ರತೀಕವಾಗಿದೆ.
ಸಾಯುವವರೆಗೆ ರಾಜಕಾರಣ ಮಾಡಬೇಕೆನ್ನುವುದೇ ರಾಜಕಾರಣಿಗಳ ಹಠ. ಮಧ್ಯದಲ್ಲಿ ಆರೋಗ್ಯ ಕೆಟ್ಟರೂ ತಾನೇ ಅಧಿಕಾರದಲ್ಲಿ ಇರಬೇಕು. ರಾಜಿನಾಮೆ ಕೊಡಬಾರದು, ಖುರ್ಚಿಗೆ ಅಂಟಿಕೊಂಡೇ ಇರಬೇಕೆಂಬ ನಿಲುವು ವಿಚಿತ್ರವಾಗಿ ಕಾಣುತ್ತಿದೆ. ಸದ್ಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಸ್ಪತ್ರೆಯ ಐಸಿಯುನಲ್ಲಿ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಅಧಿಕಾರದ ಚುಕ್ಕಾಣಿ ಬಿಟ್ಟುಕೊಡದಿರುವುದನ್ನು ಇಲ್ಲಿ ಗಮನಿಸಬಹುದು.
ಪ್ರಸ್ತುತ ಪ್ರಸಾದ್ ತಮ್ಮ ಅಧಿಕಾರದ ದುರಾಸೆಯಿಂದ ಈವರೆಗೆ ತಾನು ಸಂಪಾದಿಸಿದ್ದ ಹೆಸರಿಗೆ ಕಳಂಕ ತಂದುಕೊಳ್ಳುತ್ತಿದ್ದಾರೆ. ಅವರು ಮತ್ತೆ ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಬಹುದು, ಇನ್ನಾವುದೇ ಪಕ್ಷ ಸೇರಬಹುದು. ಆದರೆ ಅವರ ಮಾತುಗಳು ಸಜ್ಜನ ರಾಜಕಾರಣಿ ಎನ್ನುವ ಅವರ ಇಲ್ಲಿಯವರೆಗಿನ ಗೌರವಕ್ಕೆ ಚ್ಯುತಿ ತಂದಿದ್ದಂತೂ ನಿಶ್ಚಿತ.  ಅವರ ರಾಜಿನಾಮೆಯಿಂದಾಗುವ ನಷ್ಟದ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿರಬಹುದು. ಇದೇ ವೇಳೆ ಇತರೇ ಪ್ರತಿಪಕ್ಷಗಳು ಅವರ ಸೇರ್ಪಡೆ ಮಾಡಿಕೊಂಡು ಲಾಭ ಪಡೆಯಲು ಹವಣಿಸುತ್ತಿರಲೂ ಇರಬಹುದು. ಏನಿದ್ದರೂ ಪ್ರಸಾದ್ ಅವರಿಂದ  ಮೈಸೂರು ಜಿಲ್ಲೆಯಲ್ಲಿ ಒಂದಷ್ಟು  ಲಾಭ, ಹಾನಿ ಆಗಬಹುದೇ ವಿನಾ ಇತರೆ ಜಿಲ್ಲೆಗಂತೂ ಅದರ ಪರಿಣಾಮ ತಟ್ಟುವುದಿಲ್ಲ.
ಸಜ್ಜನ ಎನ್ನುವುದನ್ನು ಬಿಟ್ಟರೆ ದಲಿತರ ಸಂಘಟನೆಯನ್ನು, ಉದ್ಧಾರವನ್ನು,  ಸರ್ಕಾರಿ ಯೋಜನೆಗಳ ಲಾಭವನ್ನು ರಾಜ್ಯದ ಎಲ್ಲೆಡೆ ದಲಿತರಿಗೆ ಸಿಗುವಂತೆ ಮಾಡುವಲ್ಲಿ ಅವರ ಪಾತ್ರ ಎಲ್ಲೂ ಕಂಡುಬರುತ್ತಿಲ್ಲ.  ಏಕೆಂದರೆ ರಾಜ್ಯನಾಯಕನಾಗಿ ಅವರು ಮಿಂಚಲೇ ಇಲ್ಲ.
 
ಪ್ರಸ್ತುತ ಪ್ರಸಾದ್ ತಮ್ಮ ಅಧಿಕಾರದ ದುರಾಸೆಯಿಂದ ಈವರೆಗೆ ತಾನು ಸಂಪಾದಿಸಿದ್ದ ಹೆಸರಿಗೆ ಕಳಂಕ ತಂದುಕೊಳ್ಳುತ್ತಿದ್ದಾರೆ. ಅವರು ಮತ್ತೆ ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಬಹುದು, ಇನ್ನಾವುದೇ ಪಕ್ಷ ಸೇರಬಹುದು. ಆದರೆ ಅವರ ಮಾತುಗಳು ಸಜ್ಜನ ರಾಜಕಾರಣಿ ಎನ್ನುವ ಅವರ ಇಲ್ಲಿಯವರೆಗಿನ ಗೌರವಕ್ಕೆ ಚ್ಯುತಿ ತಂದಿದ್ದಂತೂ ನಿಶ್ಚಿತ.  ಅವರ ರಾಜಿನಾಮೆಯಿಂದಾಗುವ ನಷ್ಟದ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿರಬಹುದು. ಇದೇ ವೇಳೆ ಇತರೇ ಪ್ರತಿಪಕ್ಷಗಳು ಅವರ ಸೇರ್ಪಡೆ ಮಾಡಿಕೊಂಡು ಲಾಭ ಪಡೆಯಲು ಹವಣಿಸುತ್ತಿರಲೂ ಇರಬಹುದು. ಏನಿದ್ದರೂ ಪ್ರಸಾದ್ ಅವರಿಂದ  ಮೈಸೂರು ಜಿಲ್ಲೆಯಷಲ್ಲಿ ಒಂದಷ್ಟು  ಲಾಭ, ಹಾನಿ ಆಗಬಹುದೇ ವಿನಾ ಇತರೆ ಜಿಲ್ಲೆಗಂತೂ ಅದರ ಪರಿಣಾಮ ತಟ್ಟುವುದಿಲ್ಲ.
Share196Tweet123Send
Previous Post

3 ವರ್ಷದಲ್ಲಿ 21 ಹಿಂದೂ ಕಾರ್ಯಕರ್ತರ ಕೊಲೆ – ಮಟ್ಟಾರು

Next Post

ಕಾವೇರಿ ವಿವಾದ: ಮೇಲ್ಮನವಿ ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಾವೇರಿ ವಿವಾದ: ಮೇಲ್ಮನವಿ ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ನೀಟ್ ಲೀ ಎಐ | ನೀಟ್, ಸಿಇಟಿ ವಿದ್ಯಾರ್ಥಿಗಳಿಗೆ ಬೆಸ್ಟ್ ಅಪ್ಲಿಕೇಶನ್ | ಶಿವಮೊಗ್ಗದ ಇಂಜಿನಿಯರ್ ನಾಫಿ ಸಾಧನೆ

ನೀಟ್ ಲೀ ಎಐ | ನೀಟ್, ಸಿಇಟಿ ವಿದ್ಯಾರ್ಥಿಗಳಿಗೆ ಬೆಸ್ಟ್ ಅಪ್ಲಿಕೇಶನ್ | ಶಿವಮೊಗ್ಗದ ಇಂಜಿನಿಯರ್ ನಾಫಿ ಸಾಧನೆ

March 3, 2026
ತಮ್ಮ ಕಚೇರಿ ಸಿಬ್ಬಂದಿಯಿಂದಲೇ 1 ಲಕ್ಷ ರೂ. ಲಂಚ | ಭದ್ರಾವತಿ ಬಿಇಒ, ಮಧ್ಯವರ್ತಿ ಜೊತೆಗೆ ಲೋಕಾಯುಕ್ತ ಬಲೆಗೆ

ತಮ್ಮ ಕಚೇರಿ ಸಿಬ್ಬಂದಿಯಿಂದಲೇ 1 ಲಕ್ಷ ರೂ. ಲಂಚ | ಭದ್ರಾವತಿ ಬಿಇಒ, ಮಧ್ಯವರ್ತಿ ಜೊತೆಗೆ ಲೋಕಾಯುಕ್ತ ಬಲೆಗೆ

March 3, 2026
ಹದಿಹರೆಯದ ಉದ್ವೇಗಗಳಿಗೆ ಒಳಗಾಗದೆ ಅಧ್ಯಯನದತ್ತ ಗಮನಹರಿಸಿ: ವಿದ್ಯಾರ್ಥಿನಿಯರಿಗೆ ನಡಹಳ್ಳಿ ವಸಂತ್ ಸಲಹೆ

ಹದಿಹರೆಯದ ಉದ್ವೇಗಗಳಿಗೆ ಒಳಗಾಗದೆ ಅಧ್ಯಯನದತ್ತ ಗಮನಹರಿಸಿ: ವಿದ್ಯಾರ್ಥಿನಿಯರಿಗೆ ನಡಹಳ್ಳಿ ವಸಂತ್ ಸಲಹೆ

March 3, 2026
Record Budget: Chief Minister Must Fulfill Hometown Demands, Urges Dr. Shushrutha Gowda

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
ಸಿಎಂ ಸಿದ್ಧರಾಮಯ್ಯ ದಾಖಲೆಯ ಬಜೆಟ್ | ತವರು ಜಿಲ್ಲೆಯ ಬೇಡಿಕೆ ಈಡೇರಿಸಲಿ: ಡಾ. ಸುಶ್ರುತಗೌಡ ಆಗ್ರಹ

ಸಿಎಂ ಸಿದ್ಧರಾಮಯ್ಯ ದಾಖಲೆಯ ಬಜೆಟ್ | ತವರು ಜಿಲ್ಲೆಯ ಬೇಡಿಕೆ ಈಡೇರಿಸಲಿ: ಡಾ. ಸುಶ್ರುತಗೌಡ ಆಗ್ರಹ

March 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL