ಕಲ್ಪ ಮೀಡಿಯಾ ಹೌಸ್ | ಸಾಗರ |
ಇತ್ತೀಚಿಗೆ ತುಮರಿ ಭಾಗದಲ್ಲಿ ನೂತನ 108 ಆಂಬುಲೆನ್ಸ್ ಸೇವೆಗಾಗಿ ಸ್ಥಳೀಯರ ಪ್ರತಿಭಟನೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಧ್ಯಮಗಳಲ್ಲಿ ಸುದ್ದಿ ಭಿತ್ತರವಾರದ ಸುದ್ಧಿಗಳನ್ನು ಧನಾತ್ಮಕವಾಗಿ ಪುರಸ್ಕರಿಸಿ ಸ್ಥಳೀಯರ ಬೇಡಿಕೆಯನ್ನು ಈಡೇರಿಸಲು ಶಾಸಕ ಹರತಾಳು ಹಾಲಪ್ಪ ಅವರ ಅವಿರತ ಶ್ರಮದಿಂದ ನೂತನ 108ಸೇವೆ ನಾಳೆಯಿಂದ ತುಮರಿ ಭಾಗದಲ್ಲಿ ಸೇವೆಗೆ ಸನ್ನದ್ಧವಾಗಿದೆ.
ಶಾಸಕ ಹಾಲಪ್ಪ ಅವರ ಜನಪರ – ಕ್ಷೇತ್ರದ ಅಭಿವೃದ್ಧಿ ಪರ ಚಿಂತನೆಗೆ ಹಿಡಿದ ಕೈಗನ್ನಡಿ ಇದಾಗಿದ್ದು, ಸ್ಥಳೀಯ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದನೆ ನೀಡುವ ಸೇವಾ ಮನೋಭಾವಕ್ಕೆ ಜನಮಾನಸದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜನಪರ ಕಾಳಜಿಯ ಮನವಿ:
ಸಾಗರ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯು ಹತ್ತಾರು ಸಮಸ್ಯೆ ಹೊಂದಿದ ಆಸ್ಪತ್ರೆ ಎಂಬ ಕಳಂಕದೊಂದಿಗೆ ಕಪ್ಪು ಚುಕ್ಕೆಗೆ ಗುರಿಯಗುತ್ತಾ ಇದೆ. ಕೂಡಲೇ ಈ ಆಸ್ಪತ್ರೆಗೂ ಮೇಜರ್ ಸರ್ಜರಿ ಮಾಡಿ ಆಸ್ಪತ್ರೆಯನ್ನು ಸುಸ್ಥಿತಿಯತ್ತ ಬಡವರ, ನೊಂದವರ ಪರ ಸರ್ಕಾರಿ ಆಸ್ಪತ್ರೆಯಾಗುವಂತೆ ಗಮನಹರಿಸುವಂತೆ ಶಾಸಕರಿಗೆ ಸಾರ್ವಜನಿಕರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post