ಜಮ್ಮು, ಅ.20: ಭಾರತದ ಗಡಿ ನುಸುಳಲು ಯತ್ನಿಸುತ್ತಿದ್ದ ಆರು ಉಗ್ರರನ್ನು ಭಾರತೀಯ ಸೇನೆ ಯೋಧರು ಹಿಮ್ಮೆಟ್ಟಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತರ‌್ರಾಷ್ಟ್ರೀಯ ಗಡಿಯಲ್ಲಿ ಆರು ಉಗ್ರರು ಗಡಿ ನಸುಳಲು ಯತ್ನಿಸುತ್ತಿದ್ದರು. ಈ ವೇಳೆ ಉಗ್ರರು ಹಾಗೂ ಬಿಎಸ್‌ಎಫ್ ಯೋಧರ ನಡುವೆ ಭಾರಿ ಗುಂಡಿನ ಕಾಳಗ ನಡೆದಿದ್ದು ಕೊನೆಗೆ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಭಾರತೀಯ ಸೇನೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿ ಹಲವು ಉಗ್ರ ಶಿಬಿರಗಳನ್ನು ದ್ವಂಸಗೈದ ನಂತರ ಭಾರತದೊಳಗೆ ನುಸುಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಗುರುವಾರ ಮಧ್ಯರಾತ್ರಿ ಸುಮಾರು ೬ ಉಗ್ರರಿದ್ದ ತಂಡವೊಂದು ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್ ಯೋಧರ ವಾಹನದ ಮೇಲೆ ರಾಕೆಟ್ ಲಾಂಚರ್ ಮೂಲಕ ದಾಳಿ ನಡೆಸಿದ್ದಾರೆ.
ABD Maestro Launches 3 Premium Whiskies in Hyderabad
Kalpa Media House | Hyderabad | Hyderabad emerges as a key destination for luxury spirits as AODH, WOODBURNS, and YELLO...
Read moreDetails




