ಕಲ್ಪ ಮೀಡಿಯಾ ಹೌಸ್ | ಸೊರಬ |
ಸ್ವಾಮಿ ವಿವೇಕಾನಂದ ಎಂದರೆ ಯುವಕರಿಗೆ ಸ್ಪೂರ್ತಿ, ಎಲ್ಲೆ ಇಲ್ಲದ ಉತ್ಸಾಹ ವಿವೇಕಾನಂದರ ಹೆಸರಿನಲ್ಲಿ ವೃತ್ತ ಅನಾವರಣಗೊಳ್ಳುತ್ತಿರುವುದು ಸಂತಸದ ವಿಚಾರ ಎಂದು ಮುರಘಾಮಠದ ಶ್ರೀ ಡಾ. ಮಹಾಂತ ಸ್ವಾಮಿಗಳು ಹೇಳಿದರು.
ಹೊಸಪೇಟೆ ಬಡಾವಣೆಯ ವೃತ್ತಕ್ಕೆ ಸ್ವಾಮಿ ವಿವೇಕಾನಂದ ವೃತ್ತ ಎಂದು ಘೋಷಣೆ ಮಾಡಿ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.

ಯುವಾ ಬ್ರಿಗೇಡ್ ಕಾರ್ಯಕರ್ತರು ಮೊದಲಿನಿಂದಲೂ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಾ ದೇವಸ್ಥಾನ, ಕಲ್ಯಾಣಿ, ಶಾಲೆ ಹೀಗೆ ಹಲವು ಕಡೆ ಸ್ವಚ್ಛತಾ ಕಾರ್ಯ ಮಾಡುತ್ತಾ ಬಂದಿದ್ದು, ಹೊಸಪೇಟೆ ಬಡಾವಣೆಯ ವೃತ್ತಕ್ಕೆ ಸ್ವಾಮಿ ವಿವೇಕಾನಂದ ವೃತ್ತ ಎಂದು ಹೆಸರಿಡಲು ಹಲವು ವರ್ಷಗಳಿಂದ ಪ್ರಯತ್ನಿಸಿದ್ದರು. ವಿವೇಕಾನಂದರ 159ನೇ ಜಯಂತಿಯ ಸಂದರ್ಭದಲ್ಲಿ ಹಲವು ಸಂಘಸಂಸ್ಥೆಗಳ ಸಹಕಾರದೊಂದಿಗೆ ಇಂದು ಈ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರೂ ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ನಂತರ ವಿವೇಕಾನಂದರ ಘೋಷಣೆಗಳನ್ನು ಕೂಗುತ್ತಾ ಮುರಘಾಮಠದವರೆಗೂ ಮೆರವಣಿಗೆ ಮಾಡಿದರು. ಡಾ. ಜ್ಞಾನೇಶ್ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದರು.

ಬಿ.ಜೆ.ಪಿ ಸೊರಬ ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಯುವಾ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮಹೇಶ್ ಖಾರ್ವಿ, ಕಾರ್ಯಕರ್ತರಾದ ರಂಗನಾಥ ಮೊಗವೀರ, ಮಂಜು, ಕೃಷ್ಣ ಮೊಗವೀರ, ಬಸವರಾಜ ಪಾಟೀಲ್, ವಿನೋದ್ ವಾಲ್ಮೀಕಿ, ಅನಿಲ್ ಮಾಳವಾದೆ, ಇಂಧೂದರ, ಲೋಕೇಶ್, ಪ್ರಪುಲ್, ಪ್ರಮುಖರಾದ ಪಾಣಿ ರಾಜಪ್ಪ, ಲಯನ್ಸ್ ಕ್ಲಬ್‌ನ ಹೆಚ್. ಎಸ್. ಮಂಜಪ್ಪ, ಎಂ.ಡಿ. ಉಮೇಶ್, ಆರ್‌ಎಸ್‌ಎಸ್‌ನ ರಾಜಾರಾಮ್, ಮಹೇಶ್ ಕಟ್ಟಿನಕೆರೆ, ಸುಧಾಕರ ಭಾವೆ, ಬ್ರಹ್ಮ ಕುಮಾರಿ ಚೇತನಕ್ಕ, ಡಿ. ಶಿವಯೋಗಿ, ಭೂಪಾಲಪ್ಪ ಜೈನ್, ವಿಶ್ವ ಹಿಂದೂ ಪರಿಷತ್‌ನ ಕಾಳಿಂಗ ರಾಜ್, ರಾಜು ಹಿರಿಯಾವಲಿ, ಆನಂದ ಆಚಾರ್, ಸಂಜೀವ ಆಚಾರ್, ಭಜರಂಗದಳದ ಶಶಿಕುಮಾರ, ಜೆಸಿಐನ ಪ್ರಶಾಂತ ದೊಡ್ಮನೆ, ಆಶಿಕ್ ನಾಗಪ್ಪ, ಅಭಿಷೇಕ ಗೌಡ, ದೇವೇಂದ್ರಪ್ಪ, ಆಟೋ ಶಿವು, ರೇಣುಕಮ್ಮ ಗೌಳಿ, ಲಕ್ಷ್ಮಿ ನಾರಾಯಣ ಉರುಣಕರ್, ಸವಿತಾ ಭಟ್, ರಂಗನಾಥ ಆಚಾರ್, ಕೇಶವ ಪೇಟ್ಕರ್, ರೂಪದರ್ಶಿನಿ, ಚಂದ್ರಕಾಂತ, ಅನಿಲ್ ಆಚಾರ್, ವೀಣಾ, ಶಾಂತಿ, ಯಶೋದಮ್ಮ, ರಾಜೀವಿ, ರವಿ, ವೇಣುಗೋಪಾಲ್, ಶಿವಕುಮಾರ, ವಾಸಂತಿ ನಾವಡ, ಲಕ್ಷ್ಮಿ ಮುರಳೀಧರ, ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















