ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟರ್ ಮೂಲಕ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.

ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥ ಬದಲಿಸುವ ಈ ಶುಭ ಸಂದರ್ಭವಿದು. ಈ ಕಾಲಘಟ್ಟದಲ್ಲಿ ರಾಜ್ಯದ ಜನತೆಯ ಹೊಸ ಕನಸು, ಆಸೆ-ಆಕಾಂಕ್ಷೆಗಳು ಈಡೇರಲಿ. ಎಲ್ಲರ ಬಾಳಲ್ಲಿ ಹೊಸ ಚೈತನ್ಯ ಮೂಡಲಿ. ಸಂಕ್ರಮಣದ ಪರ್ವಕಾಲ ಎಲ್ಲರ ಬಾಳಲ್ಲಿ ಶುಭ ತರಲಿ. ಎಲ್ಲರೂ ಒಟ್ಟಾಗಿ ಕೋವಿಡ್ ವಿರುದ್ಧ ಹೋರಾಡಿ ಭಾರತ ಹಾಗೂ ಕರ್ನಾಟಕವನ್ನು ಕೋವಿಡ್ ಮುಕ್ತ ಮಾಡೋಣ ಎಂದು ಸಿಎಂ ಕರೆ ನೀಡಿದ್ದಾರೆ.

ಮತ್ತೊಮ್ಮೆ ಸಂಕ್ರಾಂತಿ ಹಬ್ಬದ ಶುಭ ಹಾರೈಕೆಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















