ಬೆಂಗಳೂರು: ಅ:21; ವಿಧಾನಸೌಧದ ಆವರಣದಲ್ಲೇ 2.5 ಕೋಟಿ ರೂ ಹಣ ಜಪ್ತಿ ಮಾಡಲಾಗಿದೆ. ಯಾವುದೇ ರೀತಿಯ ದಾಖಲೆ ಇಲ್ಲದ ಹಣವನ್ನು ವಿಧಾನಸೌಧದ ಆವರಣದ ಕಾರಿನಲ್ಲಿದ್ದ ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಕೆಂಗಲ್ ಹನುಮಂತಯ್ಯ ಮುಖ್ಯ ದ್ವಾರದ ಮೂಲಕ ವಿಧಾನಸೌಧ ಪ್ರವೇಶಿಸಲು ಮುಂದಾದ ಏಂ-04 ಒಒ-9018 ಸಂಖ್ಯೆಯ ವೋಕ್ಸ್ವ್ಯಾಗನ್ ಕಾರನ್ನು ರಕ್ಷಣಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ.
ಮಧ್ಯಾಹ್ನ 2.30ಕ್ಕೆ ಬಂದ ಕಾರಿನಲ್ಲಿ ಮೂರು ಬಾಕ್ಸ್ ಗಳಲ್ಲಿ ಹಣವನ್ನಿರಿಸಲಾಗಿತ್ತು.
ಕಾರಿನ ಮಾಲಿಕ ಧಾರವಾಡ ಮೂಲ ವಕೀಲ ಸಿದ್ದಾಥರ್್ ಅವರನ್ನು ವಶಕ್ಕೆ ಪಡೆದಿರುವ ಪೋಲೀಸರು, ಡಿಸಿಪಿ ಕಚೇರಿಯಲ್ಲಿ ಭದ್ರತಾ ಡಿಸಿಪಿ ಯೋಗೇಶ್ ಮತ್ತು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಟೇಲ್ ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣವನ್ನು ವಿಧಾನಸೌಧ ಪೊಲೀಸರಿಂದ ಪ್ರಕರಣವನ್ನು ಕಬ್ಬನ್ ಪಾಕರ್್ ಪೊಲೀಸ್ ಠಾಣೆಗೆ ವಗರ್ಾಯಿಸಲಾಗಿದೆ.
ವಿಚಾರಣೆ ವೇಳೆ ವಕೀಲ ಸಿದ್ಧಾಥರ್್ ಗೊಂದಲದ ಹೇಳಿಕೆ ನೀಡುತ್ತಿದ್ದು, ನ್ಯಾಯಾಂಗ ಇಲಾಖೆಯ ಓರ್ವ ಸಿಬ್ಬಂದಿಗೆ ಸೇರಿದ್ದಾಗಿದೆ ಮತ್ತೊಮ್ಮೆ ಉತ್ತರ ಕನರ್ಾಟಕ ಭಾಗದ ಜನಪ್ರತಿನಿಧಿಗೆ ಸೇರಿದ್ದು ಎಂಬ ಹೇಳಿಕೆ ಗೊಂದಲ ಸೃಷ್ಟಿಸಿದೆ. ಸದ್ಯ ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕೂಡ ಮಾಹಿತಿ ಪಡೆದಿದ್ದಾರೆ. ವಕೀಲ ಸಿದ್ಧಾಥರ್್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಕಬ್ಬನ್ ಪಾಕರ್್ ಪೊಲೀಸರಿಂದ ತನಿಖೆ ನಡೆಯುತ್ತಿದೆ.
Discussion about this post