ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದು, ಈ ಬೆಳವಣಿಗೆ ಚುನಾವಣೆಗೂ ಮುನ್ನ ಭಾರೀ ಬಿರುಗಾಳಿ ಎಬ್ಬಿಸಿದೆ.
ಉತ್ತರಪ್ರದೇಶದ ಡಿಸಿಎಂ ಕೇಶವ ಮೌರ್ಯ, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವಸಿಂಗ್ ಅವರುಗಳ ನೇತೃತ್ವದಲ್ಲಿ ಅಪರ್ಣಾ ಯಾದವ್ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈವೇಳೆ ಮಾತನಾಡಿರುವ ಅಪರ್ಣಾ ಯಾದವ್, ನನಗೆ ದೇಶ ಮೊದಲು. ಉಳಿದಿದ್ದೆಲ್ಲವೂ ನಂತರ ಹೀಗಾಗಿ ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಕೆಲಸ ಹಾಗೂ ಯೋಜನೆಗಳಿಂದ ಪ್ರೇರಿತಳಾಗಿ ಇಂದು ಬಿಜೆಪಿ ಸೇರಿದ್ದೇನೆ ಎಂದರು.
ಅಪರ್ಣಾ ಯಾದವ್ ಅವರ ಈ ನಡೆ ಈಗ ನಡೆಯಲಿರುವ ಚುನಾವಣೆ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post