ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಗತ್ಯ ವಸ್ತುಗಳಾದ ಹಾಲು, ನೀರು ಮತ್ತು ವಿದ್ಯುತ್ ದರ ಸೇರಿದಂತೆ ಬೆಲೆ ಏರಿಕೆಯ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ. ಅದು ಪ್ರಸ್ತಾಪವಷ್ಟೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಮಾಡುವ ವಿಚಾರವಾಗಿ ನನಗೆ ಪ್ರಸ್ತಾವನೆ ಬಂದಿದ್ದು ಹೌದು, ಆದರೆ ಎಲ್ಲಾ ದೃಷ್ಟಿಕೋನದಿಂದ ನಾವು ನೋಡಬೇಕಾಗುತ್ತದೆ. ಕೊರೋನಾ ಹೊಡೆತದಿಂದ ಸಾಕಷ್ಟು ಜನ ನಲುಗಿಹೋಗಿದ್ದಾರೆ, ಜನರ ಜೀವದ ಜೊತೆಗೆ ಜೀವನವೂ ಮುಖ್ಯ, ಬೆಲೆ ಏರಿಕೆ ವಿಚಾರದಲ್ಲಿ ತರಾತುರಿಯ ನಿರ್ಧಾರವಿಲ್ಲ ಎಂದರು.
ಕೊರೋನಾದಿಂದಾಗಿ ಬಡ-ಮಧ್ಯಮ ವರ್ಗದ ಜನರು ಕಷ್ಟದಲ್ಲಿದ್ದಾರೆ. ಎಲ್ಲಾ ಆಯಾಮಗಳಲ್ಲಿ ನೋಡಿಕೊಂಡು ನಾವು ತೀರ್ಮಾನ ಮಾಡುತ್ತೇವೆ, ಈ ವಿಷಯದಲ್ಲಿ ಅವಸರದ ತೀರ್ಮಾನಗಳಿಲ್ಲ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post