ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2025ರ ವೇಳೆಗೆ ದೇಶದಲ್ಲಿರುವ ಪ್ರತಿ ಗ್ರಾಮಕ್ಕೂ ಇಂಟರ್’ನೆಟ್ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಬಜೆಟ್’ನಲ್ಲಿ ಈ ವಿಚಾರವನ್ನು ಉಲ್ಲೇಖಿಸಿರುವ ಅವರು, ೫ಜಿ ಇಂಟರ್ನೆಟ್ ನೀಡಿಕೆಯಿಂದ ಉತ್ಪಾದನೆಯ ಹೆಚ್ಚಳ ನಿರೀಕ್ಷೆಯಿದ್ದು, 2022ರಲ್ಲಿ 5ಜಿ ತರಂಗಾಂತರ ಹರಾಜು ಮಾಡಲಾಗುವುದು ಎಂದರು.
ಎಲ್ಲಾ ಹಳ್ಳಿಗಳಲ್ಲೂ ಸೂಕ್ತ ಇಂಟರ್ನೆಟ್ ಸಂಪರ್ಕ ಒದಗಿಸಲು ಸರಕಾರ ಬದ್ಧವಾಗಿದ್ದು, ಭಾರತ್ ನೆಟ್ ಯೋಜನೆಯಡಿ ಪ್ರತೀ ಹಳ್ಳಿಯ ಪ್ರತೀ ಹಳ್ಳಿಯ, ಪ್ರತೀ ಮನೆಗೂ ಇಂಟರ್ನೆಟ್ ಸೌಲಭ್ಯ, ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೇವೆ ಒದಗಿಸಲಾಗುತ್ತದೆ ಎಂದರು.
2022ರಲ್ಲಿ 5ಎ ತರಾಂಗಾಂತರ ಹರಾಜಿನ ಮೂಲಕ 2022-23ರ ಹೊತ್ತಿಗೆ 5ಎ ಸೇವೆ ಆರಂಭವಾಗಲಿದೆ. 5ಎ ಸಂಬಂಧಿತ ವಸ್ತುಗಳ ಉತ್ಪಾದನೆಗೆ ಹಾಗೂ ಮೂಲ ಸೌಕರ್ಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು. 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್ನೆಟ್ ನೀಡುವ ಗುರಿಯೊಂದಿಗೆ ಆಪ್ಟಿಕಲ್ ಫೈಬರ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್’ಬ್ಯಾಂಡ್, ಇಂಟರ್’ನೆಟ್ ಸೇವೆ ನೀಡಲಾಗುವುದು. ಖಾಸಗಿ ಟೆಲಿಕಾಂ ಕಂಪನಿಗಳಿಂದ 5ಎ ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು 2022ರಲ್ಲೇ ನಡೆಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post