ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ತೆರಿಗೆದಾರರಿಗೆ ಈ ಬಾರಿಯ ಆಯವ್ಯಯದಲ್ಲಿ ಬಿಗ್ ರಿಲೀಫ್ ನೀಡಿರುವ ಕೇಂದ್ರ ಸರ್ಕಾರ, ಹಲವು ಸುಧಾರಣೆಗಳನ್ನು ಘೋಷಿಸಿದೆ.
ಈ ಬಗ್ಗೆ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ, ರಾಜ್ಯ ನೌಕರರಿಗೆ ಬಿಗ್ ರಿಲೀಫ್ ನೀಡಲಾಗಿದೆ.
ದೇಶದಲ್ಲಿ ಆದಾಯ ತೆರಿಗೆ ಪಾವತಿಯನ್ನು ಮರೆತಿರುವವರಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದಿರುವ ವಿತ್ತ ಸಚಿವರು, ತೆರಿಗೆ ಸಂಗ್ರಹಕ್ಕೆ ಪುರಾಣ ಪುಣ್ಯಕತೆಗಳೇ ನಮಗೆ ಪ್ರೇರಣೆಯಾಗಿದೆ ಎಂದು ಹೇಳುವ ಮೂಲಕ ತೆರಿಗೆ ಕಳ್ಳರ ನೈತಿಕತೆಯನ್ನು ಕುಟುಕಿದ್ದಾರೆ.
ಇನ್ನು, ವಿಶೇಷ ಚೇತನ ಮಕ್ಕಳ ಪೋಷಕರಿಗೆ, ಕೇಂದ್ರ-ರಾಜ್ಯ ಸರಕಾರ ನೌಕರರಿಗೆ ತೆರಿಗೆ ವಿನಾಯ್ತಿ ನೀಡಿದ್ದು, ಕೇಂದ್ರ ರಾಜ್ಯ ಸರಕಾರದ ನೌಕರರಿಗೆ ಏಕ ರೂಪದ ತೆರಿಗೆ ಘೋಷಿಸಲಾಗಿದೆ.
ಸಹಕಾರ ಸಂಘಗಳ ತೆರಿಗೆ ಶೇ. 18ರಿಂದ ಶೇ. 15ಕ್ಕೆ ಇಳಿಕೆ ಮಾಡಲಾಗಿದ್ದು, ಸಹಕಾರಿ ಸಂಘಗಳಿಗೆ ಏಕರೂಪದ ತೆರಿಗೆ ವ್ಯವಸ್ಥೆ ಘೋಷಿಸಲಾಗಿದೆ.
ಐಟಿ ರಿಟರ್ನ್ಸ್ ಸಲ್ಲಿಕೆಗೂ ಹೊಸ ನೀತಿ ಜಾರಿಯಾಗಲಿದ್ದು, ಬದುಕಿರುವಾಗಲೇ ವಿಮೆ ಹಣ ಪಡೆಯುವ ಅವಕಾಶವನ್ನು ಕಲ್ಪಿಸಲಾಗುತ್ತದೆ.
ಡಿಜಿಟಲ್ ಆಸ್ತಿ ಮೇಲೆ ಶೇ.30ರಷ್ಟು ತೆರಿಗೆ ಘೋಷಣೆ ಮಾಡಲಾಗಿದ್ದು, ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮೇಲೆ ಶೇ.1ರಷ್ಟು ಟಿಡಿಎಸ್ ಕಡಿತ ಘೋಷಿಸಲಾಗಿದೆ.
ಒಂದು ಮಾರುಕಟ್ಟೆ, ಒಂದು ತೆರಿಗೆ ಯೋಜನೆ ಜಾರಿಯಾಗಲಿದ್ದು, ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನೀತಿ ಘೋಷಣೆ ಮಾಡಿದ್ದು, 2023ರ ಮಾರ್ಚ್‌ವರೆಗೂ ತೆರಿಗೆ ವಿನಾಯ್ತಿ ನೀಡಲಾಗಿದೆ.
ಪ್ರಮುಖವಾಗಿ ತೆರಿಗೆ ಪಾವತಿದಾರರು ಹಾಗೂ ಇಲಾಖೆ ನಡುವೆ ಇರುವ ವ್ಯಾಜ್ಯಗಳ ಇತ್ಯರ್ಥಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ವಿತ್ತ ಸಚಿವರು ಹೇಳಿದ್ದಾರೆ.
ಐಟಿ ದಾಳಿ ವೇಳೆ ಸಿಕ್ಕಿಕೊಳ್ಳುವರಿಗೆ ಬಿಗ್ ಶಾಕ್ ನೀಡಿರುವ ಕೇಂದ್ರ ಸರ್ಕಾರ, ದಾಳಿ ವೇಳೆ ಸಿಕ್ಕ ಸಂಪತ್ತಿಗೆ ತೆರಿಗೆ ಕಟ್ಟುವುದು ಅನಿವಾರ್ಯ. ಐಟಿ ದಾಳಿ ವೇಳೆಡ ಸೀಜ್ ಮಾಡಲಾದ ಆಸ್ತಿಯನ್ನು ನಷ್ಟವೆಂದು ಪರಿಗಣಿಸುವಂತಿಲ್ಲ ಎಂದಿದೆ.
ಈ ಜನವರಿಯಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಜನವರಿ ಒಂದೇ ತಿಂಗಳಲ್ಲಿ 1.40 ಲಕ್ಷ ಕೋಟಿ ತೆರಿಗೆ ಸಂಗ್ರಹದ ದಾಖಲೆಯಾಗಿದೆ.
ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ 30% ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ವರ್ಗಾವಣೆಯಿಂದ ಉಂಟಾಗುವ ನಷ್ಟವನ್ನು ಯಾವುದೇ ಇತರೆ ಆದಾಯದ ವಿರುದ್ಧ ಹೊಂದಿಸಲಾಗುವುದಿಲ್ಲ. ಅಂತಹ ಸ್ವತ್ತುಗಳ ಉಡುಗೊರೆಯನ್ನು ಸ್ವೀಕರಿಸುವವರ ಕೈಯಿಂದ ತೆರಿಗೆ ವಿಧಿಸಲಾಗುತ್ತದೆ ಎಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post