ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಈ ಹಿಂದೆ ಹಲವು ಬಾರಿ ವಿದ್ಯಾರ್ಥಿ ಸಂಸತ್ ಅಧಿವೇಶನಗಳು ನಡೆದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಇಂತಹುದ್ದೇ ಅಧಿವೇಶನವೊಂದು ನಡೆದಿದೆ.
ಹೌದು… ಗೇರುಪುರ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಿನ್ನೆ ವಿದ್ಯಾರ್ಥಿ ಸಂಸತ್ ವಿಶೇಷ ಅಧಿವೇಶನ ನಡೆಯಿತು. ವಿದ್ಯಾರ್ಥಿಗಳಾದ ಕೆ.ಎನ್. ದರ್ಶನ್ ಮುಖ್ಯಮಂತ್ರಿಯಾಗಿದ್ದರೆ, ವೈ.ಜಿ. ದೀಕ್ಷಿತ್ ಉಪಮುಖ್ಯಮಂತ್ರಿಯಾಗಿ, ಜಿ. ಪ್ರಜ್ವಲ್ ಪ್ರತಿಪಕ್ಷ ನಾಯಕನಾಗಿ, ಜಿ.ಆರ್. ಹಾಲೇಶ್ ಸಭಾಧ್ಯಕ್ಷರಾಗಿ ಪಾಲ್ಗೊಂಡಿದ್ದರು.

ಈ ಕುರಿತಂತೆ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಸಂಸತ್ ಅಧಿವೇಶನ ಹೇಗೆ ನಡೆಯುತ್ತದೆ, ನಿಯಮಾವಳಿಗಳೇನು, ಹೇಗೆ ವಿಷಯ ಮಂಡಿಸಬೇಕು, ಹೇಗೆ ವಾದ ಮಂಡಿಸಬೇಕು ಎಂಬೆಲ್ಲಾ ವಿಷಯಗಳ ಕುರಿತಾಗಿ ತಿಳಿಸಿದ್ದರು. ವಿದ್ಯಾರ್ಥಿಗಳೂ ಸಹ ಉತ್ಸಾಹದಿಂದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.
ಇದೊಂದು ಅರ್ಥಪೂರ್ಣವಾದ ಈ ಕಾರ್ಯಕ್ರಮದಲ್ಲಿ ಪ್ರಚಲಿತ ಹಲವಾರು ಸಮಸ್ಯೆ ಅಹವಾಲುಗಳ ಬಗ್ಗೆ ಭವಿಷ್ಯದ ಪ್ರಜೆಗಳು ಭಾಗವಹಿಸಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಯೋಗೀಶ್ ಎಚ್ ಹೆಬ್ಬಳಗೆರೆ, ನಿಲಯದ ಪಾಲಕರಾದ ಆರ್. ಶಾಂತನಾಯ್ಕ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















