ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಸಂಜೆ ಪೊಲೀಸ್ ಇಲಾಖಾ ವತಿಯಿಂದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಡಿಎಆರ್ ತುಕಡಿ, ಕೆಎಸ್ಆರ್.ಪಿ ತುಕಡಿಯೊಂದಿಗೆ ರೂಟ್ ಮಾರ್ಚ್ ನಡೆಸಿದರು.

ನಗರದ ಮಿಳ್ಳಘಟ್ಟ ಕ್ರಾಸ್ ನಿಂದ ಪ್ರಾರಂಭವಾದ ರೂಟ್ ಮಾರ್ಚ್ ಅಣ್ಣಾ ನಗರ, ಟಿಪ್ಪು ನಗರ ಚಾನೆಲ್ ಏರಿಯಾ, ಪದ್ಮ ಟಾಕೀಸ್, ಜೆ.ಪಿ ನಗರದಿಂದ ನೇತಾಜಿ ಸರ್ಕಲ್, ಆಯನೂರು ಗೇಟ್ ಮುಖಾಂತರ ಬಿ. ಹೆಚ್ ರಸ್ತೆಯಿಂದ ಅಮೀರ್ ಅಹಮ್ಮದ್ ಸರ್ಕಲ್ ಮುಖಾಂತರ ಗಾಂಧಿ ಬಜಾರ್, ಎಂಕೆಕೆ ರಸ್ತೆ, ಲಷ್ಕರ್ ಮೊಹಲ್ಲಾ ನಂತರ ಬಿ. ಹೆಚ್ ರಸ್ತೆ ಮೂಲಕ ಡಿಎಆರ್ ಪೊಲೀಸ್ ಮೈದಾನದಲ್ಲಿ ಮುಕ್ತಾಯವಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















