ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಜಾಬ್ ಹಾಗೂ ಕೇಸರಿ ವಿವಾದದಿಂದಾಗಿ ಕಳೆದ ವಾರದಿಂದ ಮುಚ್ಚಿದ್ದದ ಶಾಲೆಗಳು ಜಿಲ್ಲೆಯಲ್ಲಿ ಇಂದಿನಿಂದ ಪೊಲೀಸ್ ಭದ್ರತೆಯಲ್ಲಿ ಆರಂಭವಾಗಿದೆ.
ಜಿಲ್ಲೆಯಲ್ಲಿ ಇಂದಿನಿಂದ ಹೈಸ್ಕೂಲ್ ತರಗತಿಗಳು ಆರಂಭವಾಗಿದ್ದು, ಸೂಕ್ಷ್ಮ ಶಾಲೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇವು ಸೂಕ್ಷ್ಮ ಶಾಲೆಗಳು:
ಇನ್ನು, ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯ 118 ಶಾಲೆಗಳನ್ನು ಸೂಕ್ಷ್ಮ ಶಾಲೆಗಳು ಎಂದು ಗುರುತಿಸಲಾಗಿದೆ. ಇದರಲ್ಲಿ, ಜಿಲ್ಲೆಯ 49 ಹಾಗೂ ಶಿವಮೊಗ್ಗ ತಾಲೂಕಿನ 68 ಶಾಲೆಗಳಿವೆ.
ನಿಷೇಧಾಜ್ಞೆ ಜಾರಿ:
ಹಾಗೆಯೇ, ಇಂದಿನಿಂದ ಹೈಸ್ಕೂಲ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲೆಗಳ ಸುತ್ತಲೂ 144 ಸೆಕ್ಷನ್ ಜಾರಿಗೊಳಿಸಿ, ನಿನ್ನೆಯೇ ಆದೇಶ ಹೊರಡಿಸಲಾಗಿದ್ದು, ಎಲ್ಲ ಶಾಲೆಗಳ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ತರಗತಿ ಬಹಿಷ್ಕರಿಸಿ ಹೊರನಡೆದ ಕೆಲವು ವಿದ್ಯಾರ್ಥಿನಿಯರು:
ಇನ್ನು, ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿ ಪ್ರೌಢಶಾಲೆಗಳಲ್ಲಿ 10ನೆಯ ತರಗತಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ದತಾ ಪರೀಕ್ಷೆ ನಡೆಯುತ್ತಿದೆ.
ಇಂದು ಹಿಜಾಬ್ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಲಾಯಿತು. ಈ ಕ್ರಮವನ್ನು ವಿರೋಧಿಸಿದ 13 ವಿದ್ಯಾರ್ಥಿನಿಯರು ವಾಪಾಸ್ ತೆರಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post