ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನ್ಯಾಯಾಲಯದ ಆದೇಶದಂತೆ ನಿನ್ನೆಯಿಂದ ಶಾಲೆಗಳು ಆರಂಭವಾಗಿದ್ದರೂ, ಹಿಜಾಬ್ ವಿವಾದ ಮಾತ್ರ ಮುಂದುವರೆದಿದ್ದು, ಶಿಕ್ಷಣ ಬೇಕಾದರೂ ಬಿಡ್ತೀವಿ, ಹಿಜಾಬ್ ತೆಗೆಯುವುದಿಲ್ಲ ಎಂದು ನಗರದ ಕೆಲವು ಹಿಜಾಬ್’ಧಾರಿ ವಿದ್ಯಾರ್ಥಿನಿಯರು ಮೊಂಡುತನ ಮೆರೆದಿದ್ದಾರೆ.
ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಗಳಿಗೆ ಮಾತನಾಡಿದ್ದು, ನಾವು ಹಿಜಾಬ್ ತೆಗೆಯುವುದಿಲ್ಲ, ಪರೀಕ್ಷೆಗಿಂತ ನಮಗೆ ಧರ್ಮ-ಹಿಜಾಬ್ ಮುಖ್ಯ. ಇದನ್ನು ಧರಿಸಿಯೇ ನಾವು ತರಗತಿಗೆ ತೆರಳುತ್ತೇವೆ ಎಂದು ಪಟ್ಟು ಹಿಡಿದ್ದಾಳೆ.
ಆದರೆ, ನ್ಯಾಯಾಲಯದ ಆದೇಶದಂತೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಶಿಕ್ಷಕರು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ತೆರಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post