ಕಲ್ಪ ಮೀಡಿಯಾ ಹೌಸ್ | ಸೊರಬ |
ಯಾವುದೇ ಕಲಾವಿದರು ತಮ್ಮಲ್ಲಿನ ಅಭಿಜಾತ ಕಲೆಯನ್ನು ವೈಯುಕ್ತಿಕವಾಗಿ ಸೀಮಿತಗೊಳಿಸದೆ ಇನ್ನಷ್ಟು ಕಲಾವಿದರನ್ನು ಬೆಳೆಸುವಲ್ಲಿ ಶ್ರಮಿಸಬೇಕು. ಸಂಗೀತಕ್ಕೆ ಮಾನವೀಕ ಮೌಲ್ಯವನ್ನು ಬೆಸೆಯುವ ಶಕ್ತಿಯಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿದ್ದುವ, ಸಾಮರಸ್ಯ ಮೂಡಿಸುವ ಪ್ರಬಲ ಸಾಧನ ಈ ಸಂಗೀತ ಎಂದು ಕಾಸಾಸಾಂವೇ ಅಧ್ಯಕ್ಷ ಡಿ.ಎಸ್. ಶಂಕರ್ ಹೇಳಿದರು.
ಪಟ್ಟಣದ ಕೃಷ್ಣಮೂರ್ತಿ ಭಾವೆ ಸಭಾಂಗಣದಲ್ಲಿ ನಡೆದ ಯುವ ಪ್ರತಿಭೆ ಕಾವ್ಯಶ್ರೀಭಾವೆ ಅವರ ಸನ್ಮಾನ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.

ವೇದಿಕೆಯ ಗೌರವಾಧ್ಯಕ್ಷ ವಿಜಯಕುಮಾರ್ ದಟ್ಟಿ, ಆಧ್ಯಾತ್ಮ, ಸಂಗೀತ, ಜನಪದ ಕಲೆ, ಸಾಂಸ್ಕೃತಿಕ ಆಯಾಮ, ಗುಡಿಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೊರಬ ತಾಲ್ಲೂಕು ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.
ಸನ್ಮಾನ ಸ್ವೀಕರಿಸಿದ ಕಾವ್ಯಶ್ರೀಭಾವೆ ಸಂಗೀತದ ಮೂಲಕ, ಇನ್ನೋರ್ವ ಕಲಾವಿದೆ ಕವನ ಕೊಡಕಣಿ ಹನುಮಾನ್ ಛಾಲೀಸ ಪಠಿಸಿ ರಂಜಿಸಿದರು.

ಆಕಾಶವಾಣಿ ಕಲಾವಿದ ಗುರುಮೂರ್ತಿ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮಗೌಳಿ, ಪ್ರಗತಿಪರ ರೈತ ದುರ್ಗಪ್ಪ ಅಂಗಡಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಖಾರ್ವಿ, ಕೋಶಾಧ್ಯಕ್ಷ ವಿನೋದ್ ವಾಲ್ಮೀಕಿ, ಉಪಾಧ್ಯಕ್ಷೆ ಜಯಮಾಲ ಅಣ್ಣಾಜಿಗೌಡ, ಎಸ್.ಮಂಜುನಾಥ್, ಕಾರ್ಯದರ್ಶಿ ರಮೇಶ್ ಕಲ್ಲಂಬಿ, ಸಂಘಟನಾ ಕಾರ್ಯದರ್ಶಿ ಮಂಜು, ಏಕಾಂತ, ರವಿಶೇಟ್, ಕೀರ್ತಿರಾಜ್, ಪ್ರಕಾಶ್ ಬಾಪಟ್, ಕೃಷ್ಣಮೂರ್ತಿ ಭಾವೆ, ಕೃಪಾಭಾವೆ, ರಾಮಚಂದ್ರಭಟ್, ಯುವ ಬ್ರಿಗೇಡ್ ಇಂದೂಧರ, ವಿಶೃತ್, ಸೂರಜ್ ಇನ್ನೂ ಅನೇಕರಿದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















