ಕಲ್ಪ ಮೀಡಿಯಾ ಹೌಸ್ | ಸೊರಬ |
ಯಾವುದೇ ಮಂಗಳದಾಯಕ ಕಾರ್ಯಗಳಾದರೂ ಅಲ್ಲಿ ಪುರೋಹಿತರದು ಸಾರಥಿ ಕೆಲಸ, ಧಾರ್ಮಿಕ ಪರಿಭಾವನೆಯಲ್ಲಿ ಬೆಳೆದವರಿಗೆ ತಮ್ಮ ಮನೋ ಅಭಿಲಾಷೆಗೆ ಪೂರಕವಾಗಿ ದೇವರು ಮತ್ತು ಭಕ್ತನ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಅರ್ಚಕ ಪ್ರಾರ್ಥನಾರ್ಹ ಎಂದು ಪುರಸಭೆಯ ಉಪಾಧ್ಯಕ್ಷ ಮಧುರಾಯ ಶೇಟ್ ಹೇಳಿದರು.
ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಯುವಾ ಬ್ರಿಗೇಡ್ ಆಯೋಜಿಸಿದ ಮಂಗಳ ಸಾರಥಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.

ದೇಶದ ಹಲವು ಸಾಮಾಜಿಕ ಸೇವೆಯಂತೆ ಈ ವೃತ್ತಿಯೂ ಒಂದಾಗಿದ್ದು, ಮಂಗಳ ಸಾರಥಿ ಶೀರ್ಷಿಕೆ ಅಡಿಯಲ್ಲಿ ಅರ್ಚಕರನ್ನು ಸನ್ಮಾನಿಸುತ್ತಿರುವುದು ಸಂತಸದ ಸಂಗತಿ, ನಂಬಿಕೆ, ಶ್ರದ್ಧೆ, ಅಚಲವಾದ ಗುರಿಯ ಮೂಲಕ ನಿಜವಾದ ದೇವರನ್ನು ನಾವು ಕಾಣಲು ಸಾಧ್ಯ ಎಂದರು.
ಈ ವೇಳೆ ಅರ್ಚಕರುಗಳಾದ ಶ್ರೀನಾಥಮೆಹಂದಳೆ, ಮಹೇಶಗೋಖಲೆ, ಗಿರಿಧರಭಟ್, ಶೇಷಾಚಲಭಟ್ ಇವರುಗಳನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಾಥ್ ಮೆಹಂದಳೆ, ಯುವಕರು ರಾಷ್ಟ್ರಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುವ ಕಾರ್ಯದಲ್ಲಿ ತೊಡಗಬೇಕು, ದೇಶದ ಸರ್ವತೋಮುಖ ಏಳ್ಗೆಗೆ ಯುವಶಕ್ತಿಯ ಹರಣವಾಗಬಾರದು. ಈ ನಿಟ್ಟಿನಲ್ಲಿ ಯುವಬ್ರಿಗೇಡ್ ಚಿಂತನೆ ಮತ್ತು ಕಾರ್ಯ ಶ್ಲಾಘನೀಯ ಎಂದರು.

ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಸ್ವಾಮಿ ವಿವೇಕಾನಂದ ಬೋಧನಾ ಸಂಸ್ಥೆಯ ಅಧ್ಯಕ್ಷ ದಿವಾಕರ ಭಾವೆ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ಯುವಾ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮಹೇಶ್ ಖಾರ್ವಿ, ಮಂಜು, ರಂಗನಾಥ ಮೊಗವೀರ, ಅನಿಲ್ ಮಾಳವಾದೆ, ಲೋಕೇಶ್, ಕೃಷ್ಣ ಮೊಗವೀರ್, ಪ್ರಮುಖರಾದ ನಾಗರಾಜ ಗುತ್ತಿ, ಕಾಳಿಂಗರಾಜ, ವಿಜಯ್ ಕುಮಾರ್ ದಟ್ಟಿ, ಗಣಪತಿ ಓಟೂರು, ಅನಿಲ್ ಆಚಾರ್, ಹನುಮೇಶ್ ಎನ್ , ಲಕ್ಷ್ಮಿ ಮುರಳಿಧರ್, ಶಿರಾಳಕೊಪ್ಪದ ಮಧು ಬಸವರಾಜ, ಸರಸ್ವತಿ ನಾವಡ, ರಾಜೇಶ್ವರಿ, ಆಶಿಕ್ ನಾಗಪ್ಪ, ಶಿಕ್ಷಕ ಗಣಪತಿ, ಸುರೇಶ್, ವಿದ್ಯಾರ್ಥಿಗಳು ಇದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















