ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರಧ್ಬಜದ ಬದಲಾಗಿ ಭಾಗವಧ್ವಾಜ ಹಾರಿಸುತ್ತೇವೆ ಎಂದು ಸಚಿವ ಈಶ್ವರಪ್ಪ #Minister Eshwarappa ಹೇಳಿಕೆ ನೀಡಿದ್ದಾರೆ. ಅದನ್ನ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ. ಹಾಗೂ 500 ವರ್ಷಕ್ಕೆ ಬದಲಾವಣೆ ಆಗುತ್ತದೆ ಎಂದಿದ್ದಾರೆ. ಅದು ಮುಖ್ಯ ಅಲ್ಲ, ಪ್ರಸ್ತುತ ಅದು ಸಂವಿಧಾನ ವಿರೋಧ ಹೇಳಿಕೆಯಾಗಿರುವ ಕಾರಣ ಅವರ ರಾಜೀನಾಮೆ ಕೇಳುತ್ತಿದ್ದೇವೆ ಎಂದು ಶಾಸಕ ಪ್ರಿಯಾಂಕ ಖರ್ಗೆ #MLA Priyanka Kharge ಹೇಳಿದ್ದಾರೆ.
ವಿಧಾನಸೌಧದಲ್ಲಿ #Vidhana soudha ಕಾಂಗ್ರೆಸ್ ಶಾಸಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಿತಾಸಕ್ತಿಗೆ ತತ್ವಿರುದ್ಧವಾಗಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಲೇ ಇದೆ. ಇತಿಹಾಸ ತಿರುಗಿಸಿ ನೋಡಿದ್ರೆ ಅವರ ಬಣ್ಣ ಬಯಲಾಗುತ್ತದೆ ಎಂದರು.
ಆರ್‌ಎಸ್‌ಎಸ್‌ನ #RSS ಗೋಡ್ಸೆ #Godse ಗಾಂಧೀಜಿಯನ್ನು #Gandhiji ಕೊಲ್ಲುತ್ತಾರೆ. ದೇಶದ್ರೋಹದ ಚಟುವಟಿಕೆ ನಡೆಸುತ್ತಿದೆ ಎಂದು ಅಂದಿನ ಉಪಪ್ರಧಾನಿ ಪಟೇಲ್‌ರವರು ಆರ್‌ಎಸ್‌ಎಸ್‌ನ್ನು ಬ್ಯಾನ್ ಮಾಡಿದ್ದರು. ನಂತರ ಕೆಲವು ವರ್ಷಗಳ ಬಳಿಕ ಸಂವಿಧಾನಕ್ಕೆ ಬದ್ದವಾಗಿರಬೇಕು ಮತ್ತು ಯಾವುದೇ ರಾಜಕಾರಣದಲ್ಲಿ ಭಾಗಿಯಾಗಬಾರದು ಎಂಬ ಷರತ್ತು ಹಾಕಿ ನಿಷೇಧವನ್ನು ವಾಪಸ್ಸು ಪಡೆಯಲಾಯಿತು. ಸ್ವತಂತ್ರ ತಂದಿದ್ದು, ಸಂವಿಧಾನ, ಧ್ವಜ ಮತ್ತು ದೇಶ ನಿರ್ಮಾಣ ಮಾಡಿದ್ದು ನಮ್ಮ ಕಾಂಗ್ರೆಸ್ ಪೂರ್ವಜರು. ದೇಶಕ್ಕೆ ಯಾವುದೇ ಕೊಡುಗೆ ಕೊಡದೆ ಇರುವವರು ಇವತ್ತು ಮಾತನಾಡುತ್ತಿದ್ದಾರೆ. ಬಿಜೆಪಿ #BJP ದೇಶಭಕ್ತಿ ಚುನಾವಣೆಗೆ ಮಾತ್ರ ಸಿಮಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.
Also read: ಪತ್ರಕರ್ತರು ಇ-ಶ್ರಮ ಕಾರ್ಡ್‌ನ ಪ್ರಯೋಜನ ಪಡೆದುಕೊಳ್ಳುವಂತೆ ಸಚಿವ ಗೋಪಾಲಯ್ಯ ಮನವಿ
52 ವರ್ಷ ಬಳಿಕ 2002ರಲ್ಲಿ ಆರ್‌ಎಸ್‌ಎಸ್‌ನವರು #RSS ರಾಷ್ಟ್ರಧ್ವಜ ಹಾರಿಸಿದರು. ಇಷ್ಟೊಂದು ವರ್ಷ ಯಾಕೆ ಬೇಕಿತ್ತು ಧ್ವಜ ಹಾರಿಸಲು. ಇದನ್ನು ನಾನು ಹೇಳುತ್ತಿಲ್ಲ. ಆರ್‌ಎಸ್‌ಎಸ್ ನಾಯಕರು ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಸಂವಿಧಾನ ಹಾಗೂ ಧ್ವಜದ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌ಗೆ ನಂಬಿಕೆಯಿಲ್ಲ. ಆರ್‌ಎಸ್‌ಎಸ್‌ನ ಯಾರೊಬ್ಬರೂ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿ, ಪ್ರಾಣ ತ್ಯಜಿಸಿಲ್ಲ. ದೇಶಕ್ಕೆ ಆರ್‌ಎಸ್‌ಎಸ್, ಬಿಜೆಪಿ ಕೊಡುಗೆ ಏನು ಇಲ್ಲ ಎಂದು ವಾಗ್ದಾಳಿ ನಡೆಸಿದರು.
Also read: 52 ವಿದ್ಯಾರ್ಥಿನಿಯರಿಗೆ 1 ಲೀ. ಹಾಲು, 1 ಕೆಜಿ ಚಿಕನ್, ಸರ್ಕಾರ ನೀಡಿದ್ದ ಬೆಡ್’ಶೀಟ್ ಮಾಯ: ಏನಿದು ಕರ್ಮಕಾಂಡ?
ಯತ್ನಾಳ ಬಾಯಿಗೆ ಬಂದಂತೆ ಮಾತನಾಡ್ತಾರೆ. ಕಟೀಲ್ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ. ಬಿಜೆಪಿ ಅಧ್ಯಕ್ಷರಾಗಿ ಇನ್ನೂ ಒಂದು ನೋಟೀಸ್ ಕೊಟ್ಟಿಲ್ಲ. ಈಶ್ವರಪ್ಪ, ಯತ್ನಾಳಗೆ ಮೊದಲು ನೋಟೀಸ್ ನೀಡಿ, ಈಶ್ವರಪ್ಪರನ್ನು ಸಚಿವಸ್ಥಾನದಿಂದ ವಜಾ ಮಾಡಿ. ಇವತ್ತು ಸಂವಿಧಾನ, ಧ್ವಜ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಾಳೆ ದೇಶದ ಹೆಸರು ಬದಲಾಯಿಸುತ್ತಾರೆ. ಬಿಜೆಪಿಗರು ಬೋಗಸ್ ದೇಶಭಕ್ತಿ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿ ದೇಶದ ಪರವಾಗಿ ಇದೆ ಅನ್ನೋದಾದ್ರೆ ಮೋದಲು ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಿ ಎಂದು ಬಿಜೆಪಿಗೆ ಪ್ರಿಯಾಂಕ ಖರ್ಗೆ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ, ಚಿಕ್ಕಮಾಧು ಸೇರಿ ಹಲವರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post