ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸುತ್ತದೆ ಹಾಗೂ ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಬಗ್ಗೆ ತಿಳುವಳಿಕೆ ಮೂಡಿಸುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ #Kuvempu University ಕುಲಸಚಿವರಾದ ಜಿ. ಅನುರಾಧ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ 2019-20 ಮತ್ತು 2020-21ನೇಸಾಲಿನ. ವಿ.ವಿ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ರೇವಣಕರ್ ಮಾತನಾಡಿ, ಇಂದು ಎನ್‌ಎಸ್‌ಎಸ್ ಹಲವು ವಿಧದ ಕೆಲಸ ನಿರ್ವಹಿಸುವಂತೆ ಮಾಡಿದೆ. ವ್ಯಕ್ತಿತ್ವ ವಿಕಸನಕ್ಕೆ ಇದು ಸಹಕಾರಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಬಿ. ಪಿ. ವೀರಭದ್ರಪ್ಪ ಮಾತನಾಡಿ, ನಾನು ಕೂಡಾ 40 ವರ್ಷದ ಹಿಂದೆ ಎನ್‌ಎಸ್‌ಎಸ್ ವಿದ್ಯಾರ್ಥಿಯಾಗಿದ್ದೆ. ನಮ್ಮ ವಿಶ್ವವಿದ್ಯಾಲಯ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದೆ ಎಂದು ಹೇಳಿದರು.
ಇಂದು ಎನ್‌ಎಸ್‌ಎಸ್ ಮಾಡದ ಕೆಲಸವೇ ಇಲ್ಲ. ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಎನ್‌ಎಸ್‌ಎಸ್ಗೆ ಸೇರಿದರೆ ಕಾಯಕದ ಮಹತ್ವ ಅರಿವಾಗುತ್ತದೆ. ಇದು ಒಂದು ಕುಟುಂಬ ವಿದ್ದಂತೆ. ಇಲ್ಲಿ ಮೇಲು ಕೀಳು ಯಾವುದು ಇಲ್ಲ. ಎಲ್ಲಾ ಪ್ರಶಸ್ತಿ ವಿಜೇತರು ಗಳಿಗೆ ಅಭಿನಂದನೆಗಳು ಎಂದರು.
ವಿವಿಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ .ನಾಗರಾಜ್ ಪರಿಸರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ವಿವಿಗೆ ಪ್ರತಿ ವರ್ಷ ಅನೇಕ ಪ್ರಶಸ್ತಿಗಳನ್ನು ನಮ್ಮ ಅಧಿಕಾರಿಗಳೂ, ಸ್ವಯಂಸೇವಕರೂ ತಂದುಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇತರರಿಗೆ ಸ್ಪೂರ್ತಿಯಾಗುತ್ತಿದ್ದಾರೆ ಎಂದು ತಿಳಿಸಿ ಸರ್ವರನ್ನು ಸ್ವಾಗತಿಸಿದರು. ಹಣಕಾಸು ಅಧಿಕಾರಿ ರಾಮಕೃಷ್ಣ. ಎಸ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಎನ್‌ಎಸ್‌ಎಸ್ ಪ್ರಶಸ್ತಿ ಪಡೆದ , ಡಾ. ನಾಗರಾಜ ನಾಯ್ಕ್, ಡಾ. ಹೆಚ್. ಎಸ್. ಮೋಹನ್, ಪ್ರೊ. ಕೆ. ಎಮ್. ನಾಗರಾಜು, ಪ್ರಾಂಶುಪಾಲರಾದ ಪ್ರೊ. ಹೆಚ್. ಎಸ್. ಸುರೇಶ್, ಪ್ರೊ. ಬಿ. ಜಿ. ಧನಂಜಯ, ಸ್ವಯಂ ಸೇವಕರಾದ ಮಮತಾ, ಮಾರುತಿ ಇವರನ್ನು ಸನ್ಮಾನಿಸಲಾಯಿತು.
Discussion about this post