ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಷ್ಯಾ-ಉಕ್ರೇನ್ Russian – Ukraine ನಡುವೆ ಯುದ್ಧ ಪ್ರಾರಂಭವಾದ ಹಿನ್ನೆಲೆ ಫೆ.22ರಿಂದ ಉಕ್ರೇನ್ ನಲ್ಲಿನ ಭಾರತೀಯರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಈವರೆಗೆ 18 ಸಾವಿರ ಭಾರತೀಯರನ್ನು ಮರಳಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ರಕ್ಷಣಾ ಕಾರ್ಯ ಆರಂಭವಾದಾಗಿನಿಂದ ಒಟ್ಟು 18 ಸಾವಿರ ಭಾರತೀಯರು ಉಕ್ರೇನ್ ತೊರೆದಿದ್ದಾರೆ. 75 ವಿಶೇಷ ವಿಮಾನಗಳ ಮೂಲಕ 15521 ಭಾರತೀಯರನ್ನು ಕರೆತರಲಾಗಿದೆ. ಓಪರೇಷನ್ ಗಂಗಾ ಅಡಿಯಲ್ಲಿ 32 ಟನ್ ನಷ್ಟು ನೆರವು ಸಾಮಾಗ್ರಿಗಳನ್ನು ಕಳುಹಿಸಲಾಗಿದೆ ಎಂದರು.
ಬಚಾರೆಸ್ಟ್ ನಿಂದ 4575 ಭಾರತೀಯರು 21 ವಿಮಾನಗಳಲ್ಲಿ ಬಂದಿದ್ದಾರೆ. ಸುಕೆವಾದಿಂದ 1820 ಮಂದಿ 9 ವಿಮಾನಗಳ ಮೂಲಕ ಬಂದಿದ್ದಾರೆ. ಬುಡಾಪೆಸ್ಟ್ ನಿಂದ 5571 ಮಂದಿ 28 ವಿಮಾನಗಳಲ್ಲಿ ಆಗಮಿಸಿದ್ದಾರೆ.
Also read: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮೇಯರ್ ಸುನೀತಾ ಅಣ್ಣಪ್ಪರಿಗೆ ಸನ್ಮಾನ
909 ಭಾರತೀಯರು ಕೋಸಿಸಿಯಿಂದ 5 ವಿಮಾನಗಳಲ್ಲಿ ಬಂದಿದ್ದಾರೆ 2404 ಭಾರತೀಯರು ರೆಸ್ಜಾವ್ ನಿಂದ 11 ವಿಮಾನಗಳ ಮೂಲಕ ಬಂದಿದ್ದಾರೆ. ಇನ್ನು ಕೀವ್ ನಿಂದ 242 ಭಾರತೀಯರು ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧ ಪೀಡಿತ ಸುಮಿಯಿಂದ ಸುಮಾರು 600 ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post