ಕಲ್ಪ ಮೀಡಿಯಾ ಹೌಸ್ | ಮುಂಬೈ |
ರಷ್ಯಾ-ಉಕ್ರೇನ್ Russia-Ukraine ದೇಶಗಳ ನಡುವಿನ ಸಂಘರ್ಷದಿಂದಾಗಿ ಕುಸಿತ ಕಂಡಿದ್ದ ಷೇರುಗಳ ದರ, ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರ ರಚನೆಯತ್ತ ಸಾಗಿರುವಂತೆಯೇ ಭಾರತೀಯ ಷೇರು ಮಾರುಕಟ್ಟೆ ದರ Share Market Price ಕೂಡ ಏರಿಕೆ ಕಂಡಿದೆ.
ಇಂದು ಭಾರತೀಯ ಷೇರುಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಹೂಡಿಕೆದಾರರು ಷೇರು ಖರೀದಿಗೆ ಮುಂದಾಗಿದ್ದು, ಮಾರುಕಟ್ಟೆ ಏರಿಕೆಗೆ ಕಾರಣವಾಯಿತು. ಹಾಗೂ ರಷ್ಯಾ-ಉಕ್ರೇನ ನಡವಿನ ಸಂಘರ್ಷದ ರಾಜತಾಂತ್ರಿಕ ಮಾತುಕತೆಗಳು ಚಾಲ್ತಿಯಲ್ಲಿದ್ದು ಇದು ಕೂಡ ಮಾರುಕಟ್ಟೆ ಉತ್ಸಾಹವನ್ನು ಹೆಚ್ಚಿಸಿದೆ ಎನ್ನಲಾಗಿದೆ.
ಷೇರು ಮಾರುಕಟ್ಟೆ ಮೇಲೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಕೂಡ ಪರಿಣಾಮ ಬೀರಿದ್ದು, ಹೂಡಿಕೆದಾರರು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣಾ ಫಲಿತಾಂಶಗಳತ್ತ ಗಮನ ಹರಿಸಿ ಹೂಡಿಕೆ ಮಾಡತೊಡಗಿದ್ದಾರೆ. ಪ್ರಸ್ತುತ ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಜಾಗತಿಕ ಷೇರುಗಳಲ್ಲಿ ಸಾಮಾನ್ಯ ಏರಿಕೆ ಕಂಡು ಬರುತ್ತಿದ್ದು, ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಏರಿಕೆ ದಾಖಲಿಸಿದೆ.
ಯಾವ ಷೇರು ಎಷ್ಟು ಏರಿಕೆಯಾಗಿದೆ?
ಇಂದಿನ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆ ಹೆಚ್ಚಿನ ಲಾಭ ಪಡೆದಿದ್ದು, ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ 6.23 ರಷ್ಟು ಏರಿಕೆಯಾಗಿ ಪ್ರತಿ ಷೇರು 431.20ರೂಗೆ ಏರಿಕೆಯಾಗಿದೆ.
ಗುರುವಾರ ಬೆಳಗ್ಗೆ ವಹಿವಾಟು ಆರಂಭವಾದಾಗ ಆಖಉ ಸೆನ್ಸೆಕ್ಸ್ 1,322 ಅಂಕಗಳ ಅಥವಾ ಶೇ.2.42ರಷ್ಟು ಏರಿಕೆ ಕಂಡು 55,969 ಕ್ಕೆ ತಲುಪಿತು. ಅಂತೆಯೇ ಎನ್‌ಎಸ್‌ಇ ನಿಫ್ಟಿ 380 ಅಂಕಗಳ ಅಥವಾ ಶೇ. 2.32 ರಷ್ಟು ಏರಿಕೆಯಾಗಿ 16,725 ಕ್ಕೆ ತಲುಪಿದೆ. ನಿಫ್ಟಿ ಮಿಡ್ಕ್ಯಾಪ್ 100 ಸೂಚ್ಯಂಕವು ಶೇಕಡಾ 1.69 ರಷ್ಟು ಹೆಚ್ಚು ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಶೇಕಡಾ 2.03 ರಷ್ಟು ಏರಿಕೆಯಾಗಿರುವುದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಧನಾತ್ಮಕ ವಲಯದಲ್ಲಿ ವಹಿವಾಟು ನಡೆಸುತ್ತಿವೆ. ಪ್ರಮುಖವಾಗಿ ನಿಫ್ಟಿ ಆಟೋ, ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಆಟೋ ಕ್ರಮವಾಗಿ ಶೇ. 3.12 ಮತ್ತು 3.32 ರಷ್ಟು ಏರಿಕೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post