ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳಾ ಕೇಂದ್ರ ಕಾರಾಗೃಹ, ಶಿವಮೊಗ್ಗ ಇಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್, ಮೈಸೂರು ಇವರ ಸಹಯೋಗದಲ್ಲಿ ಮಾ.9ರಂದು “ಅಂತರಾಷ್ರ್ಟೀಯ ಮಹಿಳಾ ದಿನಾಚರಣೆ” International Women’s Day ಅಂಗವಾಗಿ ಮಹಿಳೆಯರ ಕುರಿತು ಉಪನ್ಯಾಸ, ಮನರಂಜನಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನೆರವೇರಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎನ್. ಸರಸ್ವತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ ಎಂಬ ಥೀಮ್‍ನೋಂದಿಗೆ ಮಹಿಳೆಯರಿಗಿರುವ ಹಕ್ಕುಗಳು ಮತ್ತು ಗೌರವದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಬಂಧಿ ನಿವಾಸಿಗಳು ಸ್ವಾವಲಂಬಿಗಳಾಗಿ, ಸಶಕ್ತರಾಗಬೇಕೆಂದು ಹೇಳಿದರು.
Also read: ಪಂಚರಾಜ್ಯ ಚುನಾವಣಾ ಫಲಿತಾಂಶ ಕರ್ನಾಟಕದಲ್ಲಿ ಸಕಾರಾತ್ಮಕ ಉತ್ತೇಜನ ನೀಡಿದೆ: ಸಿಎಂ ಬೊಮ್ಮಾಯಿ
ಲೇಖಕಿ ಶ್ರೀರಂಜಿನಿ ದತ್ತಾತ್ರಿಯವರು ಮಹಿಳೆಯರ ಕುರಿತು ಉಪನ್ಯಾಸ ನೀಡಿದರು. ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಮಹದೇವ ನಾಯ್ಕ ಪಿ, ದೇಶದ ಏಳಿಗೆಗಾಗಿ ಮಹಿಳಾ ಪ್ರಗತಿಪರ ಮನಸ್ಸುಗಳು ಹೆಚ್ಚಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧೀಕ್ಷಕರಾದ ಶಿವಾನಂದ ಆರ್ ಶಿವಪೂರ ರವರು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಬಂಧಿ ನಿವಾಸಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್, ಮೈಸೂರು ಬಹುಮಾನ ಪ್ರಾಯೋಜಕತ್ವವನ್ನು ವಹಿಸಿದ್ದರು. ಸಂಸ್ಥೆಯ ಜೈಲರ್‍ರವರಾದ ಸವಿತಾ ಬೆಳ್ಳುಂಡಗಿ, ಆಪ್ತ ಸಮಲೋಚಕಿ ಪಾರ್ವತಿ, ಎಸ್‍ಬಿಐಎಂಪಿಪಿಎಂ ಪ್ರವೀಣ್ ಕುಮಾರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕರಾದ ಅಂಬಿಕಾ ರವರು ನಿರೂಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post