ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಚ್ಚಿಟ್ಟ ಸತ್ಯಗಳನ್ನು ಸಾರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಪ್ರತಿಯೊಬ್ಬ ಹಿಂದುವೂ ಸಹ ನೋಡಲೇಬೇಕು ಎಂದು ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ K E Kantesh ಮನವಿ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ನಮ್ಮ ದೇಶದ ಅವಿಭಾಜ್ಯ ಅಂಗವಾದ ಕಾಶ್ಮೀರದಲ್ಲಿ ನಡೆದ ಭೀಕರ ಘಟನೆಯ ನೈಜ ಚಿತ್ರಣವನ್ನು ಹೊಂದಿರುವ ಈ ಚಿತ್ರವನ್ನು ಪ್ರತಿ ಹಿಂದುವೂ ವೀಕ್ಷಿಸಿದಾಗ, ನಮ್ಮ ಹಿರಿಯರು ಏನೆಲ್ಲಾ ಹಿಂಸೆ ಅನುಭವಿಸಿದ್ದಾರೆ ಎಂದರು.
Also read: ಮಾ.20ರಂದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ: ಪ್ರಾಣಿಬಲಿ ನಿಷೇಧ ಜಾಗೃತಿ ಜಾಥಾ
ಎರಡು ದಿನ ಉಚಿತ ಪ್ರದರ್ಶನ
ಇಂದು ಸಂಜೆ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಉಚಿತ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಆದರೆ ಬಹಳಷ್ಟು ಮಂದಿಗೆ ಇಂದು ವೀಕ್ಷಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಮಾರ್ಚ್ ೧೭ ಹಾಗೂ ೧೮ರಂದು ಸಂಜೆ ೫.೩೦ಕ್ಕೆ ಬಿಜೆಪಿ ವತಿಯಿಂದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಇಂದು ಸಾಧ್ಯವಾಗದೇ ಇರುವವರು ಆ ಎರಡೂ ದಿನ ಆಗಮಿಸಿ ವೀಕ್ಷಿಸಬಹುದಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post