ಉಡುಪಿ, ಅ.30: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ಬಾರಿಯ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯರು “ಬಲೀಂದ್ರ ಪೂಜೆ”ಯನ್ನು ನಡೆಸಿದರು. ಬಳಿಕ ಪಂಚ ದೀಪ ಪ್ರಜ್ವಲನೆ ಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣ ಮಠದ ಎಲ್ಲಾ ಭಾಗಗಳಿಗೂ ದೀಪವನ್ನು ಪ್ರದರ್ಶಿಸಿ ಅಲ್ಲಿಂದ ಪೇಜಾವರ ಮಠದಲ್ಲಿಯೂ ಪ್ರದರ್ಶಿಸಿ ನಂತರ ಒಳ ಕೊಟ್ಟಾರದಲ್ಲಿ ದೀಪಗಳನ್ನು ಇಡಲಾಯಿತು.
















