ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗುಜರಾತ್ ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ Bhagawathgeethe ಅಳವಡಿಕೆ ಘೋಷಣೆ ಬೆನ್ನಲ್ಲೇ ರಾಜ್ಯದಲ್ಲೂ ಇದನ್ನು ಜಾರಿ ಮಾಡುವ ಕುರಿತಾಗಿ ಚಿಂತನೆ ನಡೆದಿದ್ದು, ಆರಂಭಿಕ ಹಂತದಲ್ಲೇ ಕಾಂಗ್ರೆಸ್ ಇದನ್ನು ವಿರೋಧಿಸಿದೆ.
ಈ ಕುರಿತಂತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, D K Shivakumar ನಾನು ಆರಂಭದಿಂದಲೂ ಎನ್’ಇಪಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಈಗ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನು ನಾನು ಒಪ್ಪುವುದಿಲ್ಲ. ಪಠ್ಯದಲ್ಲಿ ಈಗಾಗಲೇ ಸಾಕಷ್ಟು ನೀತಿ ಪಾಠಗಳು ಇವೆ. ಅಷ್ಟು ಸಾಕು. ಹೊಸದಾಗಿ ಭಗವದ್ಗೀತೆಯನ್ನು ಅಳವಡಿಸಿ, ಸರ್ಕಾರ ಕ್ರೆಡಿಟ್ ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ.
Also read: ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ!? ಶಿಕ್ಷಣ ಸಚಿವರು ಹೇಳಿದ್ದೇನು?
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ ಖರ್ಗೆ, Priyanka Kharge ಗುಜರಾತ್ ಮಾಡೆಲ್ ಎಂದು ಹೇಳಲಾಗಿದ್ದರೂ ಅದು ಎಲ್ಲೂ ನಮಗೆ ಕಂಡಿಲ್ಲ. ಈಗ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಇದನ್ನು ಮಾಡುವುದಕ್ಕಿಂತಲೂ ಶಾಲೆಗಳ ಕಟ್ಟಡ, ಸಂಪನ್ಮೂಲ ಸೇರಿದಂತೆ ಮಕ್ಕಳ ಉತ್ತಮ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಿಸುವಲ್ಲಿ ಚಿಂತಿಸಬೇಕು. ಪಠ್ಯದಲ್ಲಿ ಈಗಿರುವ ನೀತಿಪಾಠಗಳೇ ಸಾಕು. ರಾಜ್ಯದಲ್ಲಿಯೂ ಸಹ ಈಗಿರುವ ಪಠ್ಯವೇ ಸಾಕು. ಬದಲಾಗಿ ಹೊಸ ಬದಲಾವಣೆಯ ಅಗತ್ಯವಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post