Read - < 1 minute
ನವದೆಹಲಿ, ಅ.30: ಮೊದಲ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯ ಮೊದಲ ಕಂತಿನಲ್ಲಿ 5,500 ಕೋಟಿರೂ. ಹಣವನ್ನು ಪಾವತಿ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಾಜಿ ಸೈನಿಕರಿಗೆ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ಬಗ್ಗೆ ಸಂಪೂರ್ಣ ಭರವಸೆ ಹೊಂದುವಂತೆ ತಿಳಿಸಿದ್ದಾರೆ. ಕಳೆದ 40 ವರ್ಷಗಳಿಂದ ಏಕ ಪಿಂಚಣಿ ಯೋಜನೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಐಟಿಬಿಪಿ ಯೋಧರೊಂದಿಗೆ ಸುಂಬೋ ಪ್ರದೇಶದಲ್ಲಿ ದೀಪಾವಳಿ ಆಚರಸಿದ ಪ್ರಧಾನಿ ಮೋದಿ ಈ ವಿಚಾರವನ್ನು ತಿಳಿಸಿದ್ದಾರೆ. ಶಿಮ್ಲಾದಿಂದ 270 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಯೋಧರು ಭಾರತವನ್ನು ಕಾಯುತ್ತಿದ್ದು, ಇಲ್ಲಿ ಯೋಧರೊಂದಿಗೆ ಸಂಭ್ರಮದಿಂದ ಹಬ್ಬವನ್ನಾಚರಿಸಿದ್ದಾರೆ.
ಸದ್ಯ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಗೆ 200 ಅಥವಾ 500 ಕೋಟಿ ಹಣ ಸಾಲುವುದಿಲ್ಲ. ಆದ್ದರಿಂದ 10,00 ಕೋಟಿ ಹಣವನ್ನು ಮೀಸಲಿಡಲು ತಾವು ಪ್ರಧಾನಿಯಾದಂದಿನಿಂದ ತೀರ್ಮಾನಿಸಿದ್ದಾಗಿ ಹೇಳಿದ್ದಾರೆ. ಕಳೆದ ಸರ್ಕಾರಗಳು ಈ ಬಗ್ಗೆ ಯಾವುದೇ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ, ಆದ್ದರಿಂದ ನಾವು ನೀಡುತ್ತಿರುವ ಯೋಜನೆಯ ಮೊತ್ತವನ್ನು ಮಾಜಿ ಯೋಧರು ಒಪ್ಪಿಕೊಳ್ಳಬೇಕೆಂದು ಕೇಳಿಕೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದರು.
ಹಣವು 4 ಕಂತುಗಳಲ್ಲಿ ಯೋಧರಿಗೆ ತಲುಪಲಿದೆ. ಮೊದಲು ಕಂತಿನಲ್ಲಿ 5,500 ಕೋಟಿ ಹಣ ನೀಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ 40 ವರ್ಷಗಳಿಂದ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆ ಅಕಾರ ನಿರ್ವಹಿಸಿದ್ದ ಸರ್ಕಾರಗಳಿಗೆ ಒಆರ್ ಒಪಿ ಬಗ್ಗೆ ಯಾವುದೇ ವಿಚಾರವೂ ತಿಳಿದಿಲ್ಲ, ಅವುಗಳು ಕೇವಲ 500 ಕೋಟಿ ಹಣವನ್ನು ಯೋಜನೆಗೆ ಬಿಡುಗಡೆ ಮಾಡಿದ್ದವು ಎಂದು ಮೋದಿ ಹೇಳಿದ್ದಾರೆ. ಅನೇಕ ಜನರು ಈ ಯೋಜನೆ ಬಗ್ಗೆ ತಪ್ಪಾಗಿ ತಿಳಿಸಿದ್ದಾರೆ. ಈ ಯೋಜನೆಯನ್ನು ಪ್ರಧಾನಿ ಮೋದಿ ಸರ್ಕಾರ ಜಾರಿ ಮಾಡಿಲ್ಲ, ಆದ್ದರಿಂದ ಮಾಜಿ ಸೈನಿಕರು ಈ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈಗಾಗಲೇ ಕೇಂದ್ರ ಆದರೆ ನಾವು ಈಗಾಗಲೇ ಈ ಯೋಜನೆ ಹಸಿರು ನಿಶಾನೆಯೊಂದಿಗೆ ಆರಂಭ ಮಾಡಿದ್ಧೇವೆ ಎಂದು ಹೇಳಿದ್ದಾರೆ.
Discussion about this post