ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
Also Read: ಶಿವಮೊಗ್ಗ: ಹೊಳಲೂರಿಗೆ ಪ್ರಧಾನಿ ಮೋದಿ ಪ್ರವಾಸ ರದ್ದು, ಜಿಲ್ಲಾ ಪಂಚಾಯತ್ ತಯಾರಿಗೆ ತಣ್ಣೀರು…!
ಟಿಪ್ಪು ನಗರದ ನಿವಾಸಿ ಜಿಕೃಲ್ಲಾ ಖಾನ್(28) ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಹಳೆಯ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗಿದೆ.
ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ವಸೀಮ್, ಶಹಬಾಜ್, ರುಮಾನ್, ಕಾಲಾ ವಸೀಮ್, ನಬೀಲ್ ಎನ್ನುವವರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಗ್ಯಾಸ್ ಇಮ್ರಾನ್ ಹಾಗೂ ಜಿಕೃಲ್ಲಾ ಖಾನ್ ನಡುವೆ ಹಿಂದೆ ಪಾರ್ಕಿಂಗ್ ವಿಚಾರವಾಗಿ ಗಲಾಟೆಯಾಗಿತ್ತು ಎನ್ನಲಾಗಿದ್ದು, ಜಿಕೃಲ್ಲಾಗೆ ಟ್ವಿಸ್ಟ್ ಇಮ್ರಾನ್ ಜೊತೆಯಲ್ಲೂ ಜಗಳವಾಗಿತ್ತು ಎಂದು ಹೇಳಲಾಗಿದೆ. ಈ ಹಳೆಯ ದ್ವೇಷವೇ ಹತ್ಯೆಗೆ ಕಾರಣ ಎನ್ನಲಾಗಿದೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post