ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಡುಗೆ ಅನಿಲ ಬೆಲೆ Cooking gas price ಪ್ರತಿ ಸಿಲಿಂಡರ್ ಗೆ 50 ರೂ. ಹೆಚ್ಚಳವಾಗಿದ್ದು, ಸಾರ್ವಜನಿಕರಿಗೆ ಬಿಕ್ ಶಾಕ್ ನೀಡಿದೆ. ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ Petrol, Diesel ದೇಶಾದ್ಯಂತ 80 ಪೈಸೆ ಏರಿಕೆಯಾಗಿದೆ.
14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 949.50 ಪೈಸೆಯಾಗಿದೆ. ಅಕ್ಟೋಬರ್ 6ರಂದು ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಳವಾಗಿದ್ದು . ನವೆಂಬರ್ 4ರಂದು ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಂಧನ ದರ ಏರಿಕೆಯಾಗಿರಲಿಲ್ಲ. ನಾಲ್ಕೂವರೆ ತಿಂಗಳ ನಂತರ ಇಂಧನ ಬೆಲೆ ಹೆಚ್ಚಳವಾಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನವೆಂಬರ್ ಆರಂಭದಲ್ಲಿ ಬ್ಯಾರೆಲ್‌ಗೆ USD 81-82 ರಷ್ಟಿದ್ದು ಈಗ USD 114 ರಷ್ಟಿದೆ. 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 349 ರೂಪಾಯಿ ಆಗಿದ್ದರೆ, 10 ಕೆಜಿ ಕಾಂಪೋಸಿಟ್ ಬಾಟಲ್ 669 ರೂಪಾಯಿ ಆಗಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2003.50 ರೂಪಾಯಿಗಳಾಗಿದೆ.
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 101.42 ಪೈಸೆಯಾಗಿದ್ದರೆ, ಡೀಸೆಲ್ ದರ ಲೀಟರ್ ಗೆ 85.80 ಪೈಸೆಯಾಗಿದೆ. ಇನ್ನು ಎಲ್ ಪಿಜಿ ಸಿಲಿಂಡರ್ ಬೆಲೆ 902.50 ಪೈಸೆಯಾಗಿದೆ.
Also read: ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಅದ್ದೂರಿ ಚಾಲನೆ | ತವರುಮನೆಯಲ್ಲಿ ಪ್ರತಿಷ್ಠಾಪನೆ
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 96.21 ಪೈಸೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 95.41 ಪೈಸೆಯಾಗಿತ್ತು. ಡೀಸೆಲ್ ಬೆಲೆ 86.67 ಪೈಸೆಯಿಂದ 87.47 ಪೈಸೆಗೆ ಹೆಚ್ಚಳವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post