ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ಪ್ರಾರಂಭವಾದ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ Muslim boycutt ಕಿಚ್ಚು ಈಗ ಗ್ರಾಮ ಮಟ್ಟದಲ್ಲೂ ಆವರಿಸಿದೆ.
ಹೌದು… ತಾಲೂಕಿನ ಮಲವಗೊಪ್ಪದ ಚನ್ನಬಸವೇಶ್ವರ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹಾಕಿದ್ದ ಮಳಿಗೆಯನ್ನು ಜಾತ್ರಾ ಸಮಿಯವರ ಒಮ್ಮತ ನಿರ್ಧಾರದಿಂದ ತೆರವುಗೊಳಿಸಲಾಗಿದೆ.
ಮುಜರಾಯಿ ಇಲಾಖೆಗೆ ಸೇರಿರುವ ಈ ಪುರಾಣ ಪ್ರಸಿದ್ಧ ದೇವಾಲಯದ ಜಾತ್ರೆಯಲ್ಲಿ ಪ್ರತಿವರ್ಷ ನೂರಾರು ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗುತ್ತದೆ. ಇದರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೂ ಅವಕಾಶ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಹಿಜಾಬ್ ಮತ್ತು ಹರ್ಷ ಹತ್ಯ ಕೊಲೆ ಪ್ರಕರಣಗಳ ಕರಿನೆರಳು ಧಾರ್ಮಿಕ ಉತ್ಸವಗಳ ಮೇಲೂ ಪರಿಣಾಮ ಬೀರುತ್ತಿದ್ದು, ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿಧಿಸಲಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಜಾತ್ರಾ ಸಲಹಾ ಸಮಿತಿ ಸದಸ್ಯರಾದ ವೆಂಕಟೇಶ್ ನಾಯ್ಕ್ ಮತ್ತು ಪರಮೇಶ್ವರ್ ನಾಯ್ಕ್, ಪ್ರತಿ ವರ್ಷ ಹೋಳಿ ಹಬ್ಬದ 7 ದಿನಗಳ ಬಳಿಕ ಚನ್ನಬಸವೇಶ್ವರ ಸ್ವಾಮೀ ರಥೋತ್ಸವ ನಡೆಯಲಿದ್ದು, ಇಂದು ಮಾರ್ಚ್ 25ರ ಶುಕ್ರವಾರ ಈ ಜಾತ್ರೆ ಆಯೋಜಿಸಲಾಗಿದೆ. ಸಂಜೆ ೬ರಿಂದ ಬೆಳಗ್ಗೆ ೬ರವರೆಗೆ ಈ ಜಾತ್ರೆ ನಡೆಯಲಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಪೂರ್ತಿ ನಡೆಯುವ ಜಾತ್ರೆಯಾಗಿರುವ ಹಿನ್ನೆಲೆಯ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿಧಿಸಲಾಗಿದೆ ಎಂದರು.
Also read: ನವೀನ್ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವಾನ
ಹಿಂದೂ ವರ್ತಕರಿಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗಿದ್ದು, ದೇವಾಲಯದ ಸಮಿತಿಯ ಒಮ್ಮತದ ಮೇರೆ ಮುಂಗಡ ನೀಡಿದ್ದ ನಾಲ್ವರು ಮುಸ್ಲಿಂ ವರ್ತಕರಿಗೆ ಹಣ ವಾಪಾಸ್ ನೀಡಿ ಮಳಿಗೆ ತೆರವುಗೊಳಿಸಲಾಗಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post