ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇನ್ನೇನು ಎಸ್’ಎಸ್’ಎಲ್’ಸಿ ಪರೀಕ್ಷೆ ಆರಂಭವಾಗಬೇಕು ಎನ್ನುವ ಮುನ್ನ ಇಲ್ಲಿನ ಮೇರಿ ಇಮ್ಯಾಕ್ಯುಲೇಟ್ ಪರೀಕ್ಷಾ ಕೇಂದ್ರದಲ್ಲಿ ಜೇನು ಹುಳುಗಳು ದಾಳಿ ನಡೆಸಿದ್ದು, ಅದೃಷ್ಠವಶಾತ್ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗಿಲ್ಲ.
ಇಂದು ಮುಂಜಾನೆ ಪರೀಕ್ಷಾ ಕೇಂದ್ರದ ಪ್ರದೇಶದಲ್ಲಿ ಸಾವಿರಾರು ಜೇನು ಹುಳುಗಳು ಏಕಾಏಕಿ ದಾಳಿ ನಡೆಸಿದವು. ಅದೃಷ್ಠವಶಾತ್ ಯಾವುದೇ ವಿದ್ಯಾರ್ಥಿಗಳಿಗೆ ಹಾನಿಯಾಗಲಿಲ್ಲ. ಆದರೆ, ವಿದ್ಯಾರ್ಥಿಗಳನ್ನು ಬಿಡಲು ಬಂದಿದ್ದ ಕೆಲವು ಪೋಷಕರಿಗೆ ಹುಳಗಳು ಕಚ್ಚಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.

ಕಲ್ಲು ಹೊಡೆದವರಾರು?
ಈ ಆವರಣದಲ್ಲಿ ಹಲವು ಕಡೆಗಳಲ್ಲಿ ಜೇನುಗೂಡುಗಳು ಕಟ್ಟಿವೆ. ಆದರೆ, ಈವರೆಗೂ ಯಾರಿಗೂ ಹುಳಗಳು ತೊಂದರೆ ನೀಡಿಲ್ಲ. ಆದರೆ, ಇಂದು ಮುಂಜಾನೆ ದುರುದ್ದೇಶಪೂರ್ವಕವಾಗಿ ದುಷ್ಕರ್ಮಿಯೊಬ್ಬ ಗೂಡಿಗೆ ಕಲ್ಲು ಹೊಡೆದಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ, ಇಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post