ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ Hijab ನಿರ್ಬಂಧ, ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಬಂದ್, ಹಲಾಲ್ Halal ಮತ್ತು ಜಟ್ಕಾಕಟ್ ವಿವಾದಗಳ ನಂತರ ಬೆಂಗಳೂರಿನಲ್ಲಿ ಆಜಾನ್ Azan ವಿರುದ್ಧ ಹೊಸ ಅಭಿಯಾನ ಆರಂಭಿಸಲಾಗುತ್ತಿದೆ.
ಮುಸ್ಲೀಂ ಸಮುದಾಯದವರು ನಮಾಜ್ ಮಾಡಿ ಅಲಾವೂ ಅಕ್ಬರ್ ಎಂದು ಕೂಗುವ ವೇಳೆಗೆ ದೇವಾಲಯಗಳಲ್ಲಿ ಓಂ ನಮಃ ಶಿವಾಯ, ಜೈ ಶ್ರೀರಾಮ್ ಎಂದು ಧ್ವನಿವರ್ಧಕಗಳಲ್ಲಿ ಕೇಳಿಸಲು ಮುಂದಾಗಿದೆ. ಈ ಅಭಿಯಾನಕ್ಕೆ ನಾಳೆಯಿಂದ ಚಾಲನೆ ಸಿಗಲಿದೆ. ಮೊದಲು ಯಲಹಂಕದ ಆಂಜನೇಯ ದೇವಾಲಯದಲ್ಲಿ ಆರಂಭಿಸಲು ಮುಂದಾಗಿರುವ ಹಿಂದೂಪರ ಸಂಘಟನೆ ನಾಳೆ ಬೆಳಿಗ್ಗೆ 5 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹಿಂದೂ ಕನ್ನಡಿಗರು ಸಂಘಟನೆ ಮುಖಂಡ ಭರತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಶ್ರೀರಾಮ ಸೇನೆಯು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದು ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ನಡೆದುಕೊಳ್ಳಲು ಮುಂಜಾನೆ 5 ಗಂಟೆಗೆ ಧ್ವನಿವರ್ಧಕ ಬಳಸುವುದನ್ನು ತಡೆಯಲು ಮನವಿ ಮಾಡಿದ್ದೇವು. ಈ ಸಂಬಂಧ ತಹಶೀಲ್ದಾರ್‌ಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಯಾರು ಕ್ರಮ ಕೈಗೊಂಡಿಲ್ಲ ಎಂದು ಧಾರಾವಾಡದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಮಸೀದಿಗಳಲ್ಲಿ ಆಜಾನ್ ನಿಲ್ಲಿಸದಿದ್ದರೆ ದೇವಾಲಯಗಳಲ್ಲಿ ಧ್ವನಿವರ್ಧಕಗಳನ್ನು ಹಾಕಿ ಬೆಳಿಗ್ಗೆ 5 ಗಂಟೆಗೆ ರಾಮಭಜನೆ, ಶಿವನಾಮ, ಓಂಕಾರಗಳನ್ನು ಹಾಕುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳಿಂದ ಬರುವ ಶಬ್ಧ ಮಾಲಿನ್ಯದಿಂದ ಮಕ್ಕಳು, ವಿದ್ಯಾರ್ಥಿಗಳು, ವೃದ್ಧರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಮಸೀದಿಗಳ ಮೇಲೆ ಹಾಕಲಾಗಿರುವ ಧ್ವನಿವರ್ಧಕಗಳನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಕಲಬುರಗಿಯ ಆಂದೋಲ ಮಠದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ.
Also read: ಸಾಗರ: ಮುಂದಿನ ಮಾರಿಜಾತ್ರೆಯೊಳಗೆ ಚುತುಷ್ಪಥ ರಸ್ತೆ ಕಾಮಗಾರಿ ಪೂರ್ಣ: ಶಾಸಕ ಹಾಲಪ್ಪ ಭರವಸೆ
ಪ್ರಾರ್ಥನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಮನೆಯಲ್ಲೇ ಪ್ರಾರ್ಥನೆ ಮಾಡುವುದು ಒಳಿತು. ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ತೊಂದರೆಯಾಗುತ್ತದೆ. ಕೂಡಲೇ ಮಸೀದಿಗಳ ಧ್ವನಿವರ್ಧಕಗಳು ತೆಗೆದು ತೆಗೆದುಹಾಕಬೇಕೆಂದು ನವನಿರ್ಮಾಣ ಸೇನೆ ವೇದಿಕೆ ಮುಖ್ಯಸ್ಥ ರಾಜ್ ಠಾಕ್ರೆ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸ್ ನುಡಿಸಲಾಗಿದೆ. ಹಾಗೂ ಮುಂಬೈನಲ್ಲಿ ಮಸೀದಿಗಳ ಮುಂದೆ ಧ್ವನಿವರ್ಧಕಗಳನ್ನು ತೆಗೆಸದಿದ್ದರೆ ಹನುಮಾನ್ ಚಾಲೀಸ್ ಮಂತ್ರ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋರ್ಟ್ ಆದೇಶದಲ್ಲೇನಿದೆ?
ಧ್ವನಿವರ್ಧಕ ಬಳಕೆ ನಿಷೇಧ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 10 ಡೆಸಿಬಲ್‌ಗಿಂತ ಕಡಿಮೆ ಧ್ವನಿವರ್ಧಕ ಮಾತ್ರ ಹಗಲಿನ ವೇಳೆ ಬಳಸಲು ಮಸೀದಿ, ದೇವಸ್ಥಾನಗಳಲ್ಲಿ ಧ್ವನಿನಿಯಂತ್ರಿಸಲು ಸೂಚನೆ ನೀಡಿತ್ತು.

ಮಾಲಿನ್ಯ ನಿಯಂತ್ರಣ ಕಾಯ್ದೆ ಅನುಸಾರ ಆದೇಶ ಪಾಲಿಸಲು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಆದೇಶ ಹೊರಡಿಸಿತ್ತು. ಪೋಲಿಸರನ್ನು ಬಳಸಿಕೊಂಡು ಧ್ವನಿವರ್ಧಕ ನಿಯಂತ್ರಣ ಮಾಡಬೇಕು, ಪೊಲೀಸ್ ಇಲಾಖೆ ನೋಟಿಸ್ ನೀಡಬೇಕು. ನೋಟೀಸಿಗೆ ಪ್ರತಿಕ್ರಿಯೆ ನೀಡದಿದ್ದರೆ, ಕಾನೂನು ಕ್ರಮ ಕೈಗೊಳ್ಳಬಹುದು ಎಂದು ರಾಜ್ಯ ಹೈಕೋರ್ಟ್ ಕೂಡ ತಿಳಿಸಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















