ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಧಾನಿ ನರೇಂದ ಮೋದಿಯವರ PM Narendra Modi ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ Jal Jeevan Mission ರಾಜ್ಯದಲ್ಲಿ ಮನೆ ಮನೆಗೂ ಗಂಗೆ ಹೆಸರಲ್ಲಿ ಅನುಷ್ಠಾನಗೊಳ್ಳುತ್ತಿದೆ. ರಾಜ್ಯದಲ್ಲಿ 2020ರಲ್ಲಿ ಮನೆ ಮನೆಗೂ ಗಂಗೆ ಯೋಜನೆಯು ಆರಂಭಿಸಲಾಯಿತು. ಈಗಾಗಲೇ 3,000 ಗ್ರಾಮಗಳಿಗೆ ಶೇ. 100ರಷ್ಟು ಮನೆಗಳಿಗೆ ಕೊಳಾಯಿ ಮೂಲಕ ವೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ Minister Eshwarappa ಹೇಳಿದರು.
ಇಂದು ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು, 50,000 ಹೆಚ್ಚಿನ ಗ್ರಾಮಗಳಲ್ಲಿ ಮನೆ ಮನೆಗೂ ಗಂಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಕೇಂದ್ರ ಸರ್ಕಾರ ಈಗಾಗಲೇ 3,325 ಕೋಟಿ ರೂ. ಹಣವನ್ನು ಮತ್ತು ರಾಜ್ಯದ ಪಾಲಾದ 2,323 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನೀರು ಪರೀಕ್ಷೆಗಾಗಿ 31 ಜಿಲ್ಲೆಗಳ 46 ತಾಲ್ಲೂಕಿನಲ್ಲಿ ಲ್ಯಾಬೋರೇಟರಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 18,600 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಯೋಜನೆಯ ಆರಂಭಕ್ಕೆ ಮುನ್ನ ರಾಜ್ಯದಲ್ಲಿ ಶೇ.25ರಷ್ಟು ಮನೆಗಳಿಗೆ ನಲ್ಲಿಯ ನೀರಿನ ಸಂಪರ್ಕವಿತ್ತು. ಈ ಯೋಜನೆಯ ತರುವಾಯ 20,56,650 ಮನೆಗಳಿಗೆ ಹೊಸದಾಗಿ ನೀರು ಸಂಪರ್ಕ ನೀಡಲಾಗಿದೆ. ಈಗ ರಾಜ್ಯದಲ್ಲಿ ಶೇಕಡಾ 46ರಷ್ಟು ಮನೆಗಳಿಗೆ ಕೂಳಾಯಿ ನೀರು ಸಂಪರ್ಕ ಲಭ್ಯವಿದೆ ಎಂದರು.
ಮನ್ ರೇಗಾ ಯೋಜನೆ :
ಕರ್ನಾಟಕ ಈ ಬಾರಿಯೂ ಮನ್ ರೇಗಾ ಕಾರ್ಯಕ್ರಮದ ಅನುಷ್ಠಾನದಲ್ಲಿ ದಾಖಲೆ ಪ್ರಗತಿಯನ್ನು ಸಾಧಿಸಿದೆ. 21-22 ರಲ್ಲಿ 13 ಕೋಟಿ ಮಾನವ ದಿನಗಳ ಗುರಿಯನ್ನು ನೀಡಲಾಗಿತ್ತು ಅದನ್ನು ಡಿಸೆಂಬರ್ ಅಂತ್ಯಕ್ಕೆ ಮುಟ್ಟಲಾಯಿತು. ಹೆಚ್ಚವರಿ 3ಕೋಟಿ ದಿನಗಳ ಗುರಿಯನ್ನು ನೀಡಲಾಯಿತು. ಮಾರ್ಚ್ಅಂತ್ಯಕ್ಕೆ 3ಕೋಟಿ 13 ಲಕ್ಷ ಮಾನವ ದಿನಗಳನ್ನು ಸೃಷ್ಟಿ ಮಾಡಿ ಗುರಿ ಮೀರಿದ ಸಾಧನೆ ಮತ್ತೊಮ್ಮೆ ಮಾಡಲಾಗಿದೆ ಎಂದರು.
ರಾಜ್ಯದ 32 ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿ ಭಾಗವಹಿಸಿದ್ದಾರೆ. ಒಟ್ಟು 3,957.45ಕೋಟಿ ಹಣವನ್ನು ಕೂಲಿ ರೂಪದಲ್ಲಿ ನೀಡಲಾಗಿದೆ. ಇದರಲ್ಲಿ 8.8ಲಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆದಿವೆ ಎಂದು ಹೇಳಿದರು.
ಮತ್ತೊಂದು ಪ್ರಯತ್ನ ಈ ಯೋಜನೆಯಲ್ಲಿ ನಡೆದಿರುವುದು ಎಂದರೆ 6.97ಕೋಟಿ ಮಾನವ ದಿನಗಳು ಕೇವಲ ಮಹಿಳೆಯರಿಗೆ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿರುವುದು. ಇದಲ್ಲದೆ 22,441 ದಿವ್ಯಾಂಗದವರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯಲ್ಲಿ 6.97ಕೋಟಿ ಮಾನವ ದಿನಗಳು ಕೇವಲ ಮಹಿಳೆಯರಿಗೆ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿರುವುದು. ಇದಲ್ಲದೆ 22,441 ದಿವ್ಯಾಂಗದವರಿಗೆ ಈ ಯೋಜನೆಯಿಂದ ಪ್ರಯೋಜನವಾಗಿದೆ ಎಂದರು.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ):
ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2021-22ನೇ ಸಾಲಿನವರೆಗೆ ರೂ.2,468.10 ಕೋಟಿಗಳನ್ನು ಬಿಡುಗಡೆಮಾಡಲಾಗಿದ್ದು ರೂ.2,211.69 ಕೋಟಿ ವೆಚ್ಚ ಮಾಡಿ ಶೇಕಡಾ 90ರಷ್ಟು ಗುರಿ ಸಾಧಿಸಲಾಗಿದೆ. ಸ್ಚಚ್ಚ ಭಾರತ್ ಮಿಷನ್ ಯೋಜನೆಯಲ್ಲಿ 12,62,423 ವೈಯಕ್ತಿಕ ಗೃಹ ಶೌಚಾಲಯ, 1,496 ಸಮುದಾಯ ಶೌಚಾಲಯ ಹಾಗೂ 3,982 ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಘಟಕಗಳು ಕಾರ್ಯಾ ಮಾಡುತ್ತಿದೆ ಎಂದರು.
ಡಿಜಿಟಲ್ ಲೈಬ್ರರಿ ಯೇಜನೆ:
18 ತಿಂಗಳ ಅವಧಿಯಲ್ಲಿ ಪಂಚಾಯ್ತಿ ಮಟ್ಟದಲ್ಲಿ ಇಂದು 5,623 ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ 2,214 ಡಿಜಿಟಲ್ ಲೈಬ್ರರಿಗಳು ಕಾರ್ಯ ನಿರ್ವಹಿಸುತ್ತಿದೆ.
ನಾವು ನಿಮ್ಮ ಮನೆಗೆ, ನಿಮ್ಮ ಒಂದು ಪುಸ್ತಕ ನಮ್ಮ ಜೋಳಿಗೆಗೆ” ಎಂಬ ಘೋಷ ವಾಕ್ಯದೊಂದಿಗೆ ಗ್ರಾಮದ ಮನೆ ಮನೆಗಳಿಗೆ ತೆರಳಿ ಪುಸ್ತಕ ಸಂಗ್ರಹ ಮಾಡಲಾಗಿದೆ. ಈಗಾಗಲೇ 10ಲಕ್ಷಕ್ಕೂ ಹೆಚ್ಚು ಪುಸ್ತಕಗಳು ದೇಣಿಗೆ ರೂಪದಲ್ಲಿ ಸ್ವೀಕಾರವಾಗಿದೆ. ಗ್ರಂಥಾಲಯವನ್ನು ಸುಸಜ್ಜಿತಗೊಳಿಸುವ ಕಾರ್ಯಕ್ರಮದಲ್ಲಿ ಒಟ್ಟು 2,777 ಗ್ರಂಥಾಲಯಗಳ ಕಟ್ಟಡಗಳನ್ನು ಇಲ್ಲಿಯತನಕ ನವೀಕರಣ ಮಾಡಲಾಗಿದೆ ಎಂದರು.
ಅಮೃತ ಗ್ರಾಮ ಪಂಚಾಯತಿ ಯೋಜನೆ :
ಗ್ರಾಮಗಳಲ್ಲಿ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸುವ ಉದ್ದೇಶದಿಂದ 2021-22 ನೇ ಸಾಲಿಗೆ 750 ಗ್ರಾಮ ಪಂಚಾಯಿತಿಗಳು ಹಾಗೂ 2022-23 ನೇ ಸಾಲಿಗೆ 750 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 1500 ಗ್ರಾಮ ಪಂಚಾಯಿತಿಗಳಲ್ಲಿ ಅಮೃತ ಯೋಜನೆಯ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಜನರ ಆಶೋತ್ತರಗಳಿಗೆ ಮತ್ತು ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ಒದಗಿಸುವುದರಲ್ಲಿ ಮೂಂಚೂಣಿಯಲ್ಲಿದೆ ಎಂದು ತಿಳಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post