ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಮನೆಯೊಂದರ ಸ್ನಾನಗೃಹದಲ್ಲಿ ಅವಿತಿದ್ದ ಬೃಹತ್ ಕಾಳಿಂಗ ಸರ್ಪವನ್ನು ಶಿವಮೊಗ್ಗದ ಸ್ನೇಕ್ ಕಿರಣ್ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಮಂಡಗದ್ದೆಯ ತ್ಯಾನಂದೂರು ಕೆರೆಕೊಪ್ಪದ ಆನಂದ ನಾಯ್ಕ ಎನ್ನುವವರ ಮನೆಯ ಸ್ನಾನದ ಮನೆಯನ್ನು ಸುಮಾರು 11 ಅಡಿ ಉದ್ದ, 8 ಕೆಜಿ ತೂಕದ ಬೃಹತ್ ಕಾಳಿಂಗ ಸರ್ಪ ಅವಿತಿತ್ತು. ವಿಷಯ ತಿಳಿದು ಆಗಮಿಸಿದ ಶಿವಮೊಗ್ಗದ ಸ್ನೇಕ್ ಕಿರಣ್ ಅವರು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಕೋಪಗೊಂಡಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಕಿರಣ್ ಬಹಳಷ್ಟು ಶ್ರಮವಹಿಸಬೇಕಾಯಿತು. ಅಂತಿಮವಾಗಿ ಅರ್ಧಗಂಟೆಯ ನಂತರ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.
ಅರಣ್ಯ ಇಲಾಖೆಯ ರಕೀಬ್, ಶ್ರೀದೇವ್, ಮನೋಜ್ ಸೇರಿ ಹಲವರು ಇದ್ದರು.









Discussion about this post