ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಕಾಂಗ್ರೆಸ್ ಪ್ರೇರಿತವಾಗಿದೆ. ಅವರ ವೃಥಾ ಆರೋಪ ಮಾಡದೆ, ಸಾಕ್ಷಿ ಇದ್ದರೆ ಕೊಡಲಿ ಎದು ಕೆ.ಎಸ್. ಈಶ್ವರಪ್ಪ K.S. Eshwarappa ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಮಿಷನ್ ಆರೋಪ ಮಾಡುವುದು, ಕೋಮುಗಲಭೆ ಸೃಷ್ಟಿಸುವುದು, ಭ್ರಷ್ಟ ಸರ್ಕಾರ ಎಂದು ಬಿಂಬಿಸುವುದು ಕಾಂಗ್ರೆಸ್‌ನವರ ಚಾಳಿಯಾಗಿದೆ. ಮುಂದಿನ ಚುನವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಕ್ಕೆ ಬೇಕಾದ ಸೀಟ್ ಸಹ ದೊರೆಯುವುದಿಲ್ಲ ಎಂದರು.
Also read: ರಾಜ್ಯದಲ್ಲಿ ಗಲಭೆ ಸೃಷ್ಟಿಸುತ್ತಿರುವ ದುಷ್ಕರ್ಮಿಗಳನ್ನು ಗಡಿಪಾರು ಮಾಡಿ: ಈಶ್ವರಪ್ಪ ಆಗ್ರಹ
ದಿಂಗಾಲೇಶ್ವರ ಸ್ವಾಮೀಜಿ ಅವರು ಈಶ್ವರಪ್ಪ ನಿರಪರಾಧಿ. ಅವರು ಆರೋಪ ಮುಕ್ತರಾಗಿ ಬರುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post