ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವ ಮಾನವ ಸಂದೇಶವನ್ನು ಕೊಟ್ಟ ರಾಷ್ಟ್ರ ಕವಿ ಕುವೆಂಪು ಅವರ ಜಿಲ್ಲೆ ನಮ್ಮ ಶಿವಮೊಗ್ಗ, ಅನೇಕ ಶಿವ ಶರಣರ ನಾಡು ನಮ್ಮದು, ಭಾವೈಕ್ಯತೆಗೆ ಹೆಸರಾದ ಜಿಲ್ಲೆ. ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ಏಕತೆ ಮುಖ್ಯವಾಗಿತ್ತು, ದೇಶ ವಿಭಜನೆಯ ನಂತರ ವಿವಿಧ ರಾಜಕಾರಣಿಗಳಿಂದ ಸೌಹಾರ್ದತೆ ಕಡಿಮೆಯಾಗಿದೆ, ಈಗಲೂ ಅವಕಾಶವಿದೆ ಸಮಾಜದಲ್ಲಿ ನಮ್ಮ ಹಿಂದುಗಳ ಮದುವೆ ಇನ್ನಿತರ ಸಮಾರಂಭದಲ್ಲಿ ನೀವೂ ಬಂದು ನಿಮ್ಮ ಕಾರ್ಯಕ್ರಮಕ್ಕೆ ನಾವು ಬರುವ ಮೂಲಕ ಭಾವೈಖ್ಯತೆ ಮೆರೆಯಬಹುದು ಎಂದು ಸಂಸದ ಬಿ. ವೈ. ರಾಘವೇಂದ್ರ MP Raghavendra ತಿಳಿಸಿದರು.
ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸೌಹಾರ್ದ ಸಹ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮಲ್ಲಿರುವ ರಕ್ತದಲ್ಲಿ ಜಾತಿಯಿಲ್ಲ, ಉಸಿರಾಡುವ ಗಾಳಿ, ನಡೆದಾಡುವ ನೆಲದಲ್ಲಿ ಬೇದ ಭಾವವಿಲ್ಲ, ಈ ಪುಣ್ಯಭೂಮಿ ಭಾರತದಲ್ಲಿ ಇರುವ ನಾವೆಲ್ಲರೂ ಭಾರತೀಯರು, ರಾಷ್ಟ್ರೀಯತೆ ವಿಚಾರದಲ್ಲಿ ನಾವೆಲ್ಲರೂ ದೇಶದ ಜೊತೆಗೆ ದೃಢವಾಗಿ ನಿಲ್ಲಬೇಕಿದೆ, ಸಮಾಜ ಘಾತುಕ ಶಕ್ತಿಗಳಿಗೆ ಒಗ್ಗಟ್ಟಿನಿಂದ ಎದುರಿಸಬೇಕಿದೆ, ನಮ್ಮ ಶ್ರೇಷ್ಠ ಸಂವಿಧಾನವು ಅನೇಕ ಅವಕಾಶ ಮತ್ತು ಆಯ್ಕೆಯನ್ನು ನೀಡಿದೆ, ಆದರೆ ನೆಲದ ಕಾನೂನಿಗೆ ಎಲ್ಲರು ತಲೆಬಾಗಲೇ ಬೇಕು, ಎಲ್ಲಾ ವಿಷಯಕ್ಕಿಂತ ದೇಶ ಮೊದಲು ಎಂಬ ಭಾವ ನಮ್ಮಲ್ಲಿ ಬರಬೇಕು ಎಂದು ಹೇಳಿದರು.
Also read: ವಸತಿ ಕಟ್ಟಡದಲ್ಲಿ ಬೆಂಕಿ: ಏಳು ಮಂದಿ ಸಜೀವ ದಹನ
ಈ ಸಂದರ್ಭದಲ್ಲಿ ಮೌಲಾನಾ ಶಾಹುಲ್ಲಾ, ಫಾದರ್ ರೊನಾಲ್ಡೊ, ಶ್ರೀಪಾಲ್, ಬಸವರಾಜಪ್ಪ, ಶ್ರೀಕಾಂತ್, ರಮೇಶ್, ಮಂಜುನಾಥ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post