ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಿಬಿಎಂಪಿ ಚುನಾವಣೆಗೆ BBMP Election ಸುಪ್ರೀಂ ಕೋರ್ಟ್ Supreme Court ಅಸ್ತು ಎಂದಿದ್ದು ಮುಂದಿನ ಎರಡು ವಾರದೊಳಗಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಆದೇಶ ನೀಡಿದೆ.
ಈ ಕುರಿತಂತೆ ಮಧ್ಯಂತರ ಆದೇಶ ಹೊರಡಿಸಿರುವ ತ್ರಿಸದಸ್ಯ ಪೀಠ, ಬಿಬಿಎಂಪಿಯ ೧೯೮ ವಾರ್ಡ್‌ಗಳಗೆ ತತಕ್ಷಣವೇ ಚುನಾವಣೆ ನಡೆಸಬೇಕು, ಎರಡು ವಾರದಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಸೂಚಿಸಿದೆ.
ವಾರ್ಡ್‌ಗಳ ಪುನರ್ ವಿಂಗಡನೆಯ ನೆಪ ಹೇಳುವಂತಿಲ್ಲ ಎಂದಿರುವ ನ್ಯಾಯಾಲಯ ಈ ಆದೇಶ ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದಿದೆ.
Also read: ಅಚಾರ್ಯತ್ರಯರ ಜಯಂತ್ಯುತ್ಸವ ಹಾಗೂ ಸಪ್ತರ್ಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ನಾವು ಸಿದ್ದ: ಸಚಿವ ಅಶೋಕ್:
ಇನ್ನು, ಸುಪ್ರೀಂ ಸೂಚನೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಆರ್. ಅಶೋಕ್, ಬಿಬಿಎಂಪಿ ಚುನಾವಣೆಗೆ ನಾವು ಸಿದ್ದರಿದ್ದೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಮೀಸಲಾತಿ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post