ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ಹಿಂದೂ ಮಹಿಳೆ ಕುಟುಂಬದ ಆಸ್ತಿಯನ್ನು ಉಳಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಾರೆ ಮತ್ತು ಕುಟುಂಬದ ಉತ್ತಮ ಭವಿಷ್ಯಕ್ಕೆ ಶ್ರಮಿಸುತ್ತಾರೆ ಎಂದು ಆರ್ ಎಸ್ ಎಸ್ ನ ಶಿವಮೊಗ್ಗ ವಿಭಾಗ ಪ್ರಮುಖರಾದ ಮಧುಕರ ತಿಳಿಸಿದರು.
ಹೊಯ್ಸಳ ಸೊಸೈಟಿಯಲ್ಲಿ ನಡೆದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ 90 ಸದಸ್ಯರಿಗೆ 34 ಲಕ್ಷ ರೂಪಾಯಿಗಳ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಕುಟುಂಬದ ಆದಾಯವನ್ನು ಅನಾವಶ್ಯಕವಾಗಿ ಖರ್ಚು ಮಾಡದೇ ಹಣವನ್ನು ಉಳಿತಾಯ ಮಾಡಬೇಕು ಮತ್ತು ಸರಳ ಜೀವನ ಶೈಲಿಯಿಂದ ಸಂಸಾರದಲ್ಲಿ ಸಂತೃಪ್ತ ಬದುಕು ಸಾದ್ಯವಾಗುತ್ತದೆ ಎಂದರು.
Also read: ಶ್ರೀ ಚೌಡೇಶ್ವರಿ ದೇವಾಲಯ ಗೋಪುರ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಂಸದ ರಾಘವೇಂದ್ರ ಚಾಲನೆ
ಉಳಿತಾಯದ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಅರ್ಪಿಸುವುದರ ಮೂಲಕ ರಾಷ್ಟ್ರ ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವ ಎಂದು ವಿನಂತಿಸಿದರು.
ಸಭೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಎಂ. ಶಂಕರ್, ನಿರ್ದೇಶಕರಾದ ಸೋಗನೇ ರಮೇಶ್, ಎನ್.ಎಂ. ರಘುರಾಮ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post