ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರೀ ಮಳೆಯಿಂದಾಗಿ ಸೋಮಿನಕೊಪ್ಪ ಕೆರೆಯ ನಡುಗಡ್ಡೆಯಲ್ಲಿ 2 ದಿನಗಳಿಂದ ಸಿಲುಕಿದ್ದ ಕುದುರೆಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
Also Read: ಎಸ್’ಎಸ್’ಎಲ್’ಸಿ ಫಲಿತಾಂಶ: 625 ಅಂಕ ಗಳಿಸಿದ ಭದ್ರಾವತಿಯ ಇಬ್ಬರು ಪ್ರತಿಭಾನ್ವಿತರು
ಭಾರೀ ಮಳೆಯಿಂದಾಗಿ ಸೋಮಿನಕೊಪ್ಪ ಕೆರೆಯ ನಡುಗಡ್ಡೆಯಲ್ಲಿ ಸುಮಾರು 13 ಕುದುರೆಗಳು ಸಿಲುಕಿ ಮೂಕವೇದನೆ ಅನುಭವಿಸುತ್ತಿದ್ದವು. ಈ ವಿಷಯ ತಿಳಿದು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗಳು ಎಲ್ಲ ಕುದುರೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Also Read: ಭದ್ರಾವತಿ ಪೂರ್ಣಪ್ರಜ್ಞ ಶಾಲೆಯ ಪ್ರತೀಕ್ಷಾಗೆ ರಾಜ್ಯಮಟ್ಟದ ರ‍್ಯಾಂಕ್
ಈ ಕಾರ್ಯಾಚರಣೆಯಲ್ಲಿ ಡಿಎಫ್’ಒ ಅಶೋಕ್ ಕುಮಾರ್, ಎಫ್’ಎಸ್’ಒ ಪ್ರವೀಣ್, ಸಿಬ್ಬಂದಿಗಳಾದ ದೇವೇಂದ್ರ ನಾಯ್ಕ್, ಕುಮಾರಸ್ವಾಮಿ, ಹರೀಶ್, ವೆಂಕಟೇಶ್ ಹಾಗೂ ವಿಜಯ್ ಕರೋಶಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post