ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ JNNCE College ಮೆ. 27 ಮತ್ತು 28 ರಂದು ಎರಡು ದಿನಗಳ ಕಾಲ ವಿದ್ಯಾರ್ಥಿಗಳ ನಾವಿನ್ಯ ಯೋಜನೆಗಳ ಪ್ರದರ್ಶನ ‘ಟೆಕ್ ಅನ್ವೇಷಣ್-2022’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಇನ್ಫಾರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್, ಎಂ.ಸಿ.ಎ ವಿಭಾಗಗಳ ವಿದ್ಯಾರ್ಥಿಗಳಿಂದ ಕೃತಕ ಬುದ್ದಿಮತೆ, ಇಮೇಜ್ ಪ್ರೊಸೆಸಿಂಗ್, ಸೆನ್ಸಾರ್ ಟೆಕ್ನಾಲಜಿ, ನ್ಯೂರಲ್ ನೆಟವರ್ಕ್, ತ್ರಿಡಿ ಮ್ಯಾಪಿಂಗ್, ರೊಬೊಟಿಕ್ಸ್, ಐಓಟಿ, ಬಿಟುಮಿನಸ್ ಘಟಕಗಳು, ಕಾಮ್ ಪೇವ್‌ಮೆಂಟ್ಸ್ ಸೇರಿದಂತೆ ಅನೇಕ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 80 ಕ್ಕು ಹೆಚ್ಚು ನಾವಿನ್ಯ ಪ್ರಯೋಗಗಳು ಪ್ರದರ್ಶನಗೊಳ್ಳಲಿದೆ. ನಗರದ ವಿವಿಧ ಕಾಲೇಜಿಗಳ ಪಿಯು ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಉನ್ನತ ಶಿಕ್ಷಣದ ಬಹು ಆಯ್ಕೆಗಳು ಸೇರಿದಂತೆ ಅನೇಕ ತಾಂತ್ರಿಕ ವಿಷಯ ಹಾಗೂ ಅನ್ವೇಷಣೆಗಳ ಕುರಿತಾಗಿ ಅರಿವು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಅಂದು ಬೆಳಿಗ್ಗೆ 9:30 ಕ್ಕೆ ಕಾಲೇಜಿನ ಆಡಳಿತ ವಿಭಾಗ ಕಟ್ಟಡದ ಸೆಮಿನಾರ್ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್ ಭಾಗವಹಿಸಲಿದ್ದಾರೆ ಎಂದರು.
Also read: ಮಳಲಿ ಮಸೀದಿ ಸ್ಥಳದಲ್ಲಿ ದೈವಸ್ಥಾನವಿತ್ತು ಶೀಘ್ರ ಮರುಸ್ಥಾಪಿಸಿ: ತಾಂಬೂಲ ಪ್ರಶ್ನೆಯಲ್ಲಿ ಉತ್ತರ
ಸುದ್ದಿಗೋಷ್ಟಿಯಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಪಿ. ಮಂಜುನಾಥ, ಕಾರ್ಯಕ್ರಮ ಸಂಯೋಜಕರಾದ ಜಿ. ಸುರೇಶ್, ಡಾ. ಸಂತೋಷ್ ಶಾನಭಾಗ್, ಪಿ.ಆರ್.ಓ ಸಿ.ಎಂ. ನೃಪತುಂಗ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post