ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ Kuvempu University 2020-21ನೇ ಸಾಲಿನಲ್ಲಿ ನಡೆದ ಅಂತಿಮ ವರ್ಷದ ಬಿಬಿಎ ಮತ್ತು ಬಿಕಾಂ ವಿಭಾಗಗಳ ಪರೀಕ್ಷೆಯಲ್ಲಿ ನಗರದ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ NES ನಾಲ್ಕು ರ‍್ಯಾಂಕ್ ದೊರೆತಿದ್ದು, ಕಾಲೇಜಿನ ಪ್ರತಿಷ್ಠೆಗೆ ಗರಿ ಮೂಡಿದೆ.
ಬಿಬಿಎ ವಿದ್ಯಾರ್ಥಿಗಳಾದ ನೇಹಾ.ಬಿ.ಯು (ಪ್ರಥಮ), ಜುನೈದ್ ಅಹಮದ್ (ತೃತೀಯ),ಅನ್ವಿತ.ಕೆ.ಎಸ್ (ಒಂಭತ್ತನೇ) ರ‍್ಯಾಂಕ್ ಹಾಗೂ ಬಿಕಾಂ ವಿಭಾಗದಲ್ಲಿ ಸಾಕ್ಷಿ.ಕೆ.ಖಾತ್ರಿ (ಎರಡನೇ) ರ‍್ಯಾಂಕ್ ಪಡೆದಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದ ಪರವಾಗಿ ಹೃತ್ಪೂರ್ವಕ ಅಭಿನಂದಿಸಿದೆ.
Also read: ಅಡುಗೆ ಅನಿಲ ಸ್ಪೋಟ 3 ವರ್ಷದ ಮಗು ಸೇರಿ ನಾಲ್ಕು ಮಂದಿ ಸಾವು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post