ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರಕ್ಕೆ ಸೇವೆಮಾಡುವ ಮಹನೀಯರಿಗೆ ಅಳಿಲುಸೇವೆ ಮಾಡುವ ಹಾಗು ನನ್ನ ಕನ್ನಡದ ಧರ್ಮ ರಾಷ್ಟ್ರಕ್ಕೆ ಮುಟ್ಟಿಸುವ ಅವಕಾಶ ದೊರೆತಿದೆ ಎಂದು ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ, ನಟ ಜಗ್ಗೇಶ್ Actor Jaggesh ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ರಾಷ್ಟ್ರಕ್ಕೆ ಸೇವೆ ಮಾಡುವ ಮಹನೀಯರಿಗೆ ಅಳಿಲು ಸೇವೆ ಮಾಡುವ ಹಾಗೂ ನನ್ನ ಕನ್ನಡದ ಧರ್ಮ ರಾಷ್ಟ್ರಕ್ಕೆ ಮುಟ್ಟಿಸುವ ಕಾರ್ಯ ಹಳ್ಳಿಯಿಂದ ನಡೆದುಬಂದು ಕಲಾ ದೇಗುಲ ಬಾಗಿಲು ತಟ್ಟಿ ಕನ್ನಡಿಗರ ಚಪ್ಪಾಳೆಯಿಂದ ಬೆಳೆದು ಈಗ ಇಲ್ಲಿಗೆ ಬಂದಿರುವೆ ಎಂದಿದ್ದಾರೆ.

ರಾಯರ ಬಗ್ಗೆ ವಿಶ್ವಕ್ಕೆ ಕೂಗಿ ಹೇಳಿ ಎಂದಿರುವ ಅವರು, ನನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ ರಾಯರಿದ್ದಾರೆ, ಇರುತ್ತಾರೆ ಧನ್ಯವಾದ ಎಂದಿದ್ದಾರೆ.
Also read: ದಕ್ಷಿಣ ಕನ್ನಡ: 3 ದಿನದಿಂದ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿರುವ ವಿದ್ಯಾರ್ಥಿನಿಯರು
ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಪರಿಗಣಿಸಿ ನನಗೆ ಈ ಅವಕಾಶ ನೀಡಿರುವ ಪಕ್ಷದ ವರಿಷ್ಠರಿಗೆ ಧನ್ಯವಾಗಳನ್ನು ಹೇಳುತ್ತೇನೆ ಎಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















