ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಹಿಂದೆ ಗುತ್ತಿಗೆ ಪಡೆದ ಕಂಪನಿಯೊಂದಿಗೆ ಮಾತನಾಡಿ ನಾಳೆಯಿಂದಲೇ ಸಮಸ್ಸೆ ಬಗೆಹರಿಸಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯೆಕ್ಷೆ ಪವಿತ್ರ ರಾಮಯ್ಯ ತಿಳಿಸಿದರು.
ಅವರು ಮಂಗಳವಾರ ತುಂಗಾ ನಾಲೆಯಲ್ಲಿ ಹೂಳು ಎತ್ತುವ ಕುರಿತು ಹೊಯ್ಸನಳ್ಳಿ ರೈತರಿಂದ ಪಿಳ್ಳಂಗೆರೆ, ಹೊಯ್ಸನಳ್ಳಿ, ಅಬ್ಬರಗಟ್ಟೆ, ಹಾಗೂ ಕೂಡ್ಲಿಗೆ ಹರಿದು ಹೋಗುವ ತುಂಗಾ ನಾಲೆಯಲ್ಲಿ ಹೆಚ್ಚಿನ ಹೂಳು ತುಂಬಿದೆ. ಕಳೆದ ವಾರ ಸುರಿದ ಅಕಾಲಿಕ ಮಳೆಗೆ ನಾಲೆ ತುಂಬಿ ಭತ್ತ ಹಾಗೂ ಅಡಿಕೆ ಬೆಳೆಗೆ ಹಾನಿಯಾಗಿದ್ದು, ರಸ್ತೆ ಕೊಚ್ಚಿ ಹೋಗಿದೆ. ಆದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಸೆ ಕುರಿತು ಯಾವುದೇ ರೀತಿ ಗಮನಹರಿಸದೆ ನಿರ್ಲಕ್ಷ ತೋರಿದ್ದಾರೆ. ಆದ್ದರಿಂದ ಈ ಸಮಸ್ಸೆ ಕುರಿತು ತ್ವರಿತ ಗತಿಯಲ್ಲಿ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ರೈತರು ಸಲ್ಲಿಸಿದ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಸೆ ಬಗೆಹರಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರವಿಕುಮಾರ್, ರೈತ ಮುಖಂಡರಾದ ಅನುಸುಯಮ್ಮ, ಗ್ರಾಮ ಪಂಚಾಯತಿ ಸದಸ್ಯರು, ಹಾಗೂ ರೈತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post