ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ ಬಿ.ಕಾಂ. ಪರೀಕ್ಷೆಯಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜಿನ ವಿದ್ಯಾರ್ಥಿಯಾದ ಕೆ.ಆರ್. ರಾಹುಲ್ 1500ಕ್ಕೆ 1445 ಅಂಕಗಳೊಂದಿಗೆ ಆರನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸಿಎ ಕನಸು ಕಟ್ಟಿಕೊಂಡಿರುವ ರಾಹುಲ್ ಕೆ.ಆರ್. ಅವರ ಪ್ರಸ್ತುತದ ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದೆ.
ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಕುರಿತು ಸ್ಪಷ್ಟತೆ ಪಡೆದುಕೊಳ್ಳಬೇಕು. ಸರಿಯಾಗಿ ಯೋಜನೆ ಸಿದ್ಧಪಡಿಸಿಕೊಂಡು ಓದುವ ವಿಷಯದಲ್ಲಿ ಸ್ಪಷ್ಟತೆ ಪಡೆದುಕೊಳ್ಳಬೇಕು. ಕಷ್ಟಪಟ್ಟು ಓದಬೇಕು. ಆಗ ಏನಾದರೂ ಸಾಧಿಸಬಹುದು ಎನ್ನುತ್ತಾರೆ ರ್‍ಯಾಂಕ್ ಪಡೆದ ಕೆ.ಆರ್. ರಾಹುಲ್
ಹೊಸನಗರದ ನಿವಾಸಿಯಾಗಿರುವ ರಾಹುಲ್ ಯಾವುದೇ ಸಂಸ್ಥೆಗಳಿಂದ ಕೋಚಿಂಗ್ ಪಡೆಯದೇ ಸ್ವಯಂ ಪ್ರಯತ್ನದಿಂದ ಅಧ್ಯಾಪಕರ ಸಹಾಯದಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆರನೇ ರ್‍ಯಾಂಕ್ ಪಡೆದಿದ್ದಾರೆ. ಮುಂದೆ ಸಿಎ ಪಾಸ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ.
ರಾಹುಲ್‌ನ ತಂದೆ ಕೆ.ಎಸ್. ರಾಜಶೇಖರ್ ಕೃಷಿಯನ್ನು ಅವಲಂಬಿಸಿದ್ದು, ಮಗನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ತಾಯಿ ಜಯಲಕ್ಷ್ಮಿರವರು ಗೃಹಿಣಿಯಾಗಿದ್ದಾರೆ.
Also read: ಸೈಕಲ್ ಬಳಕೆಯಿಂದ ದೇಹ, ಮನಸ್ಸು ಸದೃಢ: ಮೇಯರ್ ಸುನಿತಾ ಅಣ್ಣಪ್ಪ
ನಮ್ಮ ಕಾಲೇಜು 2021-22ರ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 120 ವಿದ್ಯಾರ್ಥಿಗಳನ್ನು ಹೊಂದಿದ್ದು ಅದರಲ್ಲಿ 45 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಸದರಿ ಶೈಕ್ಷಣಿಕ ವರ್ಷದಲ್ಲಿ ಕೆ.ಆರ್. ರಾಹುಲ್ ಎಂಬ ವಿದ್ಯಾರ್ಥಿಯು ಕಾಲೇಜಿನ ಮೊದಲ ಬ್ಯಾಚ್‌ನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಬಿ.ಕಾಂ. ಪರೀಕ್ಷೆಯಲ್ಲಿ ಆರನೇ ರ್‍ಯಾಂಕ್ ಗಳಿಸಿದ್ದು, ಕಾಲೇಜಿಗೆ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಕೀರ್ತಿಯನ್ನು ತಂದಿರುತ್ತಾನೆ.
ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಿದ ಅಧ್ಯಾಪಕರಿಗೆ ಸಿಬ್ಬಂದಿ ವರ್ಗದವರಿಗೆ ಹಾಗೂ ಸಹಕಾರ ನೀಡಿದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೂ ಪ್ರಾಂಶುಪಾಲರಾದ ಬಿ.ಆರ್. ದಯಾನಂದ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post