ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೀರಶೈವ ಲಿಂಗಾಯತರ ನಡೆ ಅನುಭವ ಮಂಟಪದ ಕಡೆ ಅಭಿಯಾನ ಜೂ.12 ರಂದು ನಡೆಯುತ್ತಿದ್ದು, ಈ ಬೃಹತ್ ಸಮಾವೇಶಕ್ಕೆ ಶಿವಮೊಗ್ಗದಿಂದ ಎರಡು ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ವೀರಶೈವ ಲಿಂಗಾಯಯತ ಸಂಘಟನಾ ವೇದಿಕೆಯ ತಾಲೂಕ ಅಧ್ಯಕ್ಷ ಧನ್‌ರಾಜ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಬಸವಕಲ್ಯಾಣದಲ್ಲಿ ನಿರ್ಮಿಸಿದ ಅನುಭವ ಮಂಟಪ ನಿಜಾಮರ ಕಾಲದಲ್ಲಿ ಮಸೀದಿಯನ್ನಾಗಿ ಬದಲಾಯಿಸಲಾಗಿದೆ. ಇದನ್ನು ವಿರೋಧಿಸಿ 12ರ ಭಾನುವಾರ ಬಸವಕಲ್ಯಾಣದಲ್ಲಿ ಸಮಾವೇಶ ನಡೆಯಲಿದೆ. ಎಂದು ಹೇಳಿದರು.
770 ಮಠಾಧೀಶರು, ಶಿವಮೊಗ್ಗ, ಶಿಕಾರಿಪುರ, ಸೊರಬ, ಭದ್ರಾವತಿ ತಾಲೂಕಿನಿಂದ ಒಟ್ಟು 15 ಬಸ್ ಗಳಲ್ಲಿ ಎರಡು ಸಾವಿರಾರ ಕಾರ್ಯಕರ್ತರು ಭಾಗಿಯಾಗಿಲಿದ್ದಾರೆ ಎಂದು ತಿಳಿಸಿದರು.
Also read: ತಾಲೂಕು ಮಟ್ಟದ ಪಂಚಾಯತ್ ಕ್ರೀಡೋತ್ಸವ ಒಂದು ವಿಭಿನ್ನ ಪ್ರಯತ್ನ: ಶಾಸಕ ಈಶ್ವರಪ್ಪ ಶ್ಲಾಘನೆ
ವೇದಿಕೆಯ ಕೋಶಾಧ್ಯಕ್ಷ ಜ್ಯೋತಿ ಪ್ರಕಾಶ್ ಮಾತನಾಡಿ, ಒಬ್ಬ ಸ್ವಾಮೀಜಿಯವರು ಇದು ಅನುಭವ ಮಂಟಪ ಅಲ್ಲವೆಂದಿದ್ದಾರೆ. ಆದರೆ ಬಸವಕಲ್ಯಾಣದ ಶಾಸಕರು ಸಿಎಂಗೆ ಅವರನ್ನು ಭೇಟಿ ಮಾಡಿ ಈ ಮಸೀದಿಯನ್ನು ವೀರಶೈವ ಸಂಘಟನೆಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ.
ಅನೇಕ ಸ್ವಾಮೀಜಿಗಳು ಇಲ್ಲಿ ಅನುಭವ ಮಂಟಪ ಇತ್ತು. ಇದನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಅನೇಕ ವರ್ಷಗಳಿಂದ ಇಲ್ಲಿ ಯಾರೂ ನಮಾಜ್ ಅಥವಾ ಪೂಜಾ ಕೈಂರ್ಯಗಳನ್ನು ಮಾಡುತ್ತಿಲ್ಲ. ಹಾಗಾಗಿ ನಮಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಶಿವರಾಜ್, ಪದಾಧಿಕಾರಿಗಳಾದ ಉಮೇಶ್ ಶೆಟ್ಟಿ, ಬಿಂದು ಕುಮಾರ್, ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post