ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸೌಲಭ್ಯ ವಂಚಿತ ಮಕ್ಕಳಿಗೆ ನಟಿ ಸಂಯುಕ್ತ ಹೊರನಾಡು Actress Samyuktha Horanadu ಆಸರೆಯಾಗಲು ಮುಂದಾಗಿದ್ದಾರೆ. ಏನೆಂದು ಯೋಚಿಸುತ್ತಿದ್ದೀರಾ! ಹೌದು ಕೇರ್ ಮೋರ್ ಫೌಂಡೇಷನ್ ಮೂಲಕ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಲು ಯೋಜನೆಯೊಂದನ್ನು ರೂಪಿಸಿದ್ದಾರೆ.
ನಟಿ ಸಂಯುಕ್ತಾ ಹೊರನಾಡು ಮುಂಚೂಣಿಯಲ್ಲಿರುವ ಈ ಅಭಿಯಾನ ಜೂನ್ 5ರಿಂದ 20ರವರೆಗೆ ನಡೆಯಲಿದೆ. ಬಳಸದೆ ಇರುವ ಮತ್ತು ಬಳಸಬಹುದಾದ ಹೊಸ ಬ್ಯಾಗ್‌ಗಳನ್ನು ದೇಣಿಗೆ ನೀಡುವ ಮೂಲಕ ಮಕ್ಕಳಿಗೆ ನೆರವಾಗಿ ಎಂದು ಅವರು ಮನವಿ ಮಾಡಿದ್ದಾರೆ.
ಈ ಅಭಿಯಾನದಲ್ಲಿ ಭಾಗವಹಿಸಲಿಚ್ಚಿಸುವವರು caremore foundation caremore fdn ಹೆಸರಿನ ಟ್ವಿಟ್ಟರ್ ಹಾಗೂ ಇನ್ಸಾಇನ್ಸ್ಟಾಗ್ರಾಮ್ ಪೇಜ್‌ಗಳಲ್ಲಿ ಮಾಹಿತಿ ಪಡೆದುಕೊಳ್ಳಬಹುದು.
Also read: ಜೂ.12 ರಂದು ವೀರಶೈವ ಲಿಂಗಾಯತರ ನಡೆ ಅನುಭವ ಮಂಟಪದ ಕಡೆ ಅಭಿಯಾನ
ಸಮಾಜಮುಖಿ ಕೆಲಸಗಳಿಂದ ಅಭಿಮಾನಿಗ ಗಮನ ಸೆಳೆಯುತ್ತಿರುವ ನಟಿ ಸಂಯುಕ್ತ ಹೊರನಾಡು ಅವರ ಈ ಅಭಿಯಾನಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸೌಲಭ್ಯ ವಂಚಿತ ಶಾಲಾ ಮಕ್ಕಳ ನೆರವಿಗೆ ಧಾವಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post