ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ಯುವತಿ ರಾಧಿಕಾ (18) ಅವರನ್ನು ಲಿವರ್ ಟ್ರಾನ್ಸ್’ಪ್ಲಾಂಟ್’ಗಾಗಿ ನಗರದ ನಾರಾಯಣ ಹೃದಯಾಲಯದಿಂದ ಬೆಂಗಳೂರು ಅಪೋಲೋ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್’ನಲ್ಲಿ Zero traffic ಶಿವಮೊಗ್ಗದಿಂದ ಬೆಂಗಳೂರಿಗೆ ಇಂದು ಮಧ್ಯಾಹ್ನ ಕರೆದೊಯ್ಯಲಾಯಿತು.
ಈ ಕುರಿತಂತೆ ಝೀರೋ ಟ್ರಾಫಿಕ್’ನಲ್ಲಿ ಹೊರಡುವ ಮುನ್ನ ಮಾತನಾಡಿದ ಆ್ಯಂಬುಲೆನ್ಸ್ ಚಾಲಕ ಸದ್ದಾಮ್ ಹುಸೇನ್, ಆಂಬುಲೆನ್ಸ್’ಗೆ ದಾರಿ ಬಿಟ್ಟು ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿದರು.
Also read: ಮೈಸೂರು: ದಕ್ಷಿಣ ಪದವೀಧರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಬಿಜೆಪಿ ಪ್ರಮುಖರ ಸಭೆ
ಚಾಲಕ ಸದ್ದಾಮ್ ಈ ಮೊದಲು ಎರಡು ಬಾರಿ ಝೀರೋ ಟ್ರಾಫಿಕ್’ನಲ್ಲಿ ೨:೪೫ ನಿಮಿಷದಲ್ಲಿ ಬೆಂಗಳೂರು ತಲುಪಿಸಿದ್ದಾರೆ. ಕಿಡ್ನಿ ದಾನ ಮಾಡಲು ರಾಧಿಕಾ ಅವರ ತಾಯಿ ಮುಂದೆ ಬಂದಿದ್ದು, ದೇವರು ಅವರ ಮೇಲೆ ಅನುಗ್ರಹಿಸಲಿ ಎಂದು ಹಾರೈಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post