ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರಿ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದರೆ, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜೆಡಿಎಸ್‌ಗೆ ಭಾರೀ ಆಘಾತ ಉಂಟುಮಾಡಿದೆ.
ಇಂದು ಮಧ್ಯಾಹ್ನ ಫಲಿತಾಂಶ ಹೊರಬಿದ್ದಿದ್ದು, ಕೇಂದ್ರ ವಿತ್ರ ಸಚಿವೆ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ Nirmala Seetharaman 46 ಮತ ಪಡೆದಿದ್ದರೆ, ನಟ ಜಗ್ಗೇಶ್ Actor Jaggesh 44, ಕಮಲ ಪಕ್ಷದ ಮೂರನೆಯ ಅಭ್ಯರ್ಥಿ ಲೆಹರ್ ಸಿಂಗ್ (32) ಮತಗಳನ್ನು ಗಳಿಸುವ ಮೂಲಕ ಮೂಲಕ ಜಯಭೇರಿ ಭಾರಿಸಿದ್ದಾರೆ.
ಇನ್ನು ಹೊರರಾಜ್ಯ ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿ ಜಯರಾಮ್ ರಮೇಶ್ 46 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸುವಲ್ಲಿ ಸಶಕ್ತವಾಗಿದೆ.
Also read: ಪರಂಪರೆ ಎಂದರೆ ಮೂಢನಂಬಿಕೆಯಲ್ಲ, ಆಚರಣೆಗಳು ವೈಜ್ಞಾನಿಕ ಹಿನ್ನೆಲೆ ಹೊಂದಿವೆ…
ಇನ್ನು ಜೆಡಿಎಸ್ ಪಕ್ಷಕ್ಕೆ ಭಾರೀ ಆಘಾತ ಉಂಟಾಗಿದ್ದು, ಪಕ್ಷದಿಂದ ಚಲಾವಣೆಯಾಗಿದ್ದ 32 ಮತಗಳಲ್ಲಿ ಎರಡು ಅಸಿಂಧು ಅಥವಾ ಅಡ್ಡ ಮತ ಎಂದು ಪರಿಗಣನೆಯಾಗಿದ್ದು, ಈ ಮೂಲಕ ಜೆಡಿಎಸ್ ಕೇವಲ 30 ಮತಗಳೊಂದಿಗೆ ಸೋತು ಸುಣ್ಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post