ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಟೈಮ್ ಆಫ್ ಇಂಡಿಯಾ ಗ್ರೂಪ್‌ನ ಸೋದರ ಪತ್ರಿಕೆ ವಿಜಯ ಕರ್ನಾಟಕ ಕೊಡ ಮಾಡುವ ವರ್ಷದ ಅಚೀವರ್‍ಸ್ ಆಫ್ ಕರ್ನಾಟಕ ಪ್ರಶಸ್ತಿಗೆ Achievers of Karnataka ನಗರದ ಮಕ್ಕಳ ತಜ್ಞರು ಹಾಗೂ ಸರ್ಜಿ ಪೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಅವರು ಭಾಜನರಾಗಿದ್ದಾರೆ.
ಸರ್ಜಿ ಮದರ್ ಆ್ಯಂಡ್ ಕೇರ್ ಸೆಂಟರ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸರ್ಜಿ ಅಮೃತನಾಡಿ, ಸರ್ಜಿ ಪುಷ್ಯ ಆಸ್ಪತ್ರೆ, ಸರ್ಜಿ ಬಂಜೆತನ ನಿವಾರಣಾ ಕೇಂದ್ರ, ಸರ್ಜಿ ಇನ್ಸಿಟಿಟ್ಯೂಟ್ ಒಳಗೊಂಡ ಸರ್ಜಿ ಪೌಂಡೇಷನ್ ಅಡಿ ಉತ್ಕೃಷ್ಟ ಗುಣ ಮಟ್ಟದಲ್ಲಿ ರಿಯಾಯಿತಿ ದರದಲ್ಲಿ ನೀಡುವ ಸೇವೆ , ಉಚಿತ ಆರೋಗ್ಯ ಅರಿವು, ಆರೋಗ್ಯ ತಾಪಸಣೆ, ರಕ್ತದಾನ ಶಿಬಿರ, ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಕೈಗೊಂಡ ಸೇವೆಯನ್ನು ಪರಿಗಣಿಸಿ ಟೈಮ್ಸೌ ಗ್ರೂಪ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಾಗೂ ಚಿತ್ರದುರ್ಗ ಶ್ರೀ ಮುರುಘಾ ಶರಣರು ನಗರದ ಕಿಮ್ಮನೆ ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ಅಚೀವರ್‍ಸ್ ಆಫ್ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಕಿಮ್ಮನೆ ಗಾಲ್ಫ್ ರೆಸಾರ್ಟ್ ಎಂ.ಡಿ. ಕಿಮ್ಮನೆ ಜಯರಾಮ್ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post